ಎಸೆಸೆಲ್ಸಿ ಪರೀಕ್ಷೆ: ಉಡುಪಿಯಲ್ಲಿ 174 ಮಂದಿ ಗೈರು
ಉಡುಪಿ, ಮಾ. 27: ಜಿಲ್ಲೆಯ 51 ಪರೀಕ್ಷಾ ಕೇಂದ್ರಗಳಲ್ಲಿ ಬುಧವಾರ ನಡೆದ ಈ ಬಾರಿ ಎಸೆಸೆಲ್ಸಿಯ ದ್ವಿತೀಯ ಭಾಷಾ ಪರೀಕ್ಷೆಯಲ್ಲಿ ಹೆಸರು ನೊಂದಾಯಿಸಿಕೊಂಡ 13694 ವಿದ್ಯಾರ್ಥಿಗಳಲ್ಲಿ 13,520 ಮಂದಿ ಪರೀಕ್ಷೆ ಬರೆದಿದ್ದು, 174 ಮಂದಿ ಗೈರುಹಾಜರಾಗಿದ್ದಾರೆ.
13264 ರೆಗ್ಯುಲರ್ ಹಾಗೂ ರೆಗ್ಯುಲರ್ ಪುನರಾವರ್ತಿತ ವಿದ್ಯಾರ್ಥಿಗಳಲ್ಲಿ 13141 ಮಂದಿ ಪರೀಕ್ಷೆ ಬರೆದು 123 ಗೈರುಹಾಜರಾದರೆ, 430 ಖಾಸಗಿ ವಿದ್ಯಾರ್ಥಿಗಳಲ್ಲಿ 379 ಮಂದಿ ಪರೀಕ್ಷೆ ಬರೆದು 51 ಮಂದಿ ಗೈರುಹಾಜರಾ ಗಿದ್ದಾರೆ.ಜಿಲ್ಲೆಯ ಯಾವುದೇ ಪರೀಕ್ಷಾ ಕೇಂದ್ರದಲ್ಲಿ ಅಕ್ರಮ, ಅವ್ಯವಹಾರ ನಡೆದ ಬಗ್ಗೆ ವರದಿಯಾಗಿಲ್ಲ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story