ಮಾ.29: ಯುನಿವೆಫ಼್ ಕರ್ನಾಟಕ ಬಜ್ಪೆ ಶಾಖೆ ಆರಂಭ
ಮಂಗಳೂರು, ಮಾ.28: ‘ಸಬಲೀಕೃತ ಸದೃಢ ಸಮುದಾಯಕ್ಕಾಗಿ ಸುಶಿಕ್ಷಿತ ಸುರಕ್ಷಿತ ಸಚ್ಚರಿತ ಸಮಾಜಕ್ಕಾಗಿ ಯುನಿವೆಫ಼್ ಕರ್ನಾಟಕ’ ಎಂಬ ಧ್ಯೇಯ ವಾಕ್ಯದೊಂದಿಗೆ ಮಾ.1ರಿಂದ ಎಪ್ರಿಲ್ 7ರ ತನಕ ಯುನಿವೆಫ಼್ ಕರ್ನಾಟಕ ಹಮ್ಮಿಕೊಂಡಿರುವ ‘ಬದಲಾವಣೆಗಾಗಿ ನಾನು’ ಸದಸ್ಯತ್ವ ಅಭಿಯಾನದ ಅಂಗವಾಗಿ ಮಾ.29ರಂದು ಸಂಜೆ 5 ಗಂಟೆಗೆ ಬಜ್ಪೆಯ ಪಾಪ್ಯುಲರ್ ಶಾಲೆಯ ಬಳಿ ಯುನಿವೆಫ಼್ ಬಜ್ಪೆ ಶಾಖೆಯ ಆರಂಭ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಯುನಿವೆಫ಼್ ಸದಸ್ಯರಾಗಬಯಸುವವರು ಇತರ ಯಾವುದೇ ಸಂಘಟನೆಯಲ್ಲಿ ಸದಸ್ಯರಾಗಿರಬಾರದು. ಆದರೆ ಸ್ಥಳೀಯ ಸಂಸ್ಥೆಗಳಲ್ಲಿ ಅಥವಾ ಮಸೀದಿ ಮದ್ರಸಗಳಲ್ಲಿ ಸದಸ್ಯರಾಗಿರಬಹುದು. ಆಸಕ್ತರು ನೌಫ಼ಲ್ ಹಸನ್ ಮೊ: 8310598907 ಅಥವಾ ಅಬ್ದುಲ್ಲಾ ಪಾರೆ ಮೊ.9964024816 ಇವರನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.
Next Story