ವಿಕಲಚೇತನರಿಗೆ ಸ್ವೀಪ್ ಕಾರ್ಯಕ್ರಮ
ಉಡುಪಿ, ಮಾ.28: ವಿಕಲಚೇತನ ಮತದಾರರಿಗೆ, ಮತದಾನದ ಅರಿವು ಮೂಡಿಸುವ (ಸ್ವೀಪ್) ಕಾರ್ಯಕ್ರಮವನ್ನು ಮಾ.30ರಂದು ಬೆಳಗ್ಗೆ 11 ಕ್ಕೆ ಬ್ರಹ್ಮಗಿರಿಯ ಬಾಲಭವನದಲ್ಲಿ ಆಯೋಜಿಸಲಾಗಿದ್ದು, ಆ ಪ್ರಯುಕ್ತ ಶ್ರವಣ ದೋಷವುಳ್ಳ ಮತ್ತು ಅಂಧ ಮತದಾರರಿಗೆ ಅರಿವು ಮೂಡಿಸುವ ಹಾಗೂ ಪ್ರತಿಜ್ಞಾ ವಿಧಿ ಬೋಧಿಸುವ ಕಾರ್ಯಕ್ರಮ, ಸಂಜೆ 4ಕ್ಕೆ ಮಲ್ಪೆ ಸಮುದ್ರ ತಟ ದಲ್ಲಿ ವಿಕಲಚೇತನರಿಂದ ಬೈಕ್ ರ್ಯಾಲಿ ಮತ್ತು ಮನೋರಂಜನಾ ಕಾರ್ಯಕ್ರಮ ಗಳು ನಡೆಯಲಿವೆ.
ಈ ಕಾರ್ಯಕ್ರಮಕ್ಕೆ ವಿಕಲಚೇತನರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಜಿಲ್ಲಾ ವಿಕಲಚೇತನರ ಸಬಲೀಕರಣ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story