ಉಡುಪಿ: ಕ್ರಿಕೆಟ್ ವಿಶೇಷ ತರಬೇತಿ
ಉಡುಪಿ, ಮಾ.28: ಕ್ರಿಕೆಟ್ ಅಕಾಡೆಮಿ ಆಫ್ ಉಡುಪಿ (ಸಿಎಯು) ವತಿಯಿಂದ ಉಡುಪಿ ಕ್ರಿಶ್ಚಿಯನ್ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಇದೇ ಎ.10ರಿಂದ ಮೇ 20ರವರೆಗೆ ‘ಬೇಸಿಗೆ ಕ್ರಿಕೆಟ್ ತರಬೇತಿ ಶಿಬಿರ’ವನ್ನು ಹಮ್ಮಿಕೊಳ್ಳಲಾಗಿದೆ.
ಶಿಬಿರದಲ್ಲಿ 8 ವರ್ಷಕ್ಕೆ ಮೇಲ್ಪಟ್ಟ ಬಾಲಕ-ಬಾಲಕಿಯರಿಗೆ ತರಬೇತಿಯನ್ನು ನೀಡಲಾಗುತ್ತದೆ. ರಾಷ್ಟ್ರಮಟ್ಟದ ತರಬೇತುದಾರರು ಮಕ್ಕಳಿಗೆ ತರಬೇತಿಯನ್ನು ನೀಡಲಿದ್ದಾರೆ. ಆಸಕ್ತರು ಸಿಎಯುನ ಕಾರ್ಯದರ್ಶಿ ಸತೀಶ್ಕುಮಾರ್ ಹೆಗ್ಡೆ (ಮೊ: 8095101077) ಇವರನ್ನು ಸಂಪರ್ಕಿಸುವಂತೆ ಸಿಎಯುನ ಪ್ರಕಟಣೆ ಯಲ್ಲಿ ತಿಳಿಸಲಾಗಿದೆ.
Next Story