ಅರಸ್ತಾನ ದರ್ಗಾದ ನವೀಕೃತ ಕಟ್ಟಡ ಉದ್ಘಾಟನೆ
ಮಂಗಳೂರು, ಮಾ. 28: ಮಲಾರ್ ಅರಸ್ತಾನದ ಅಲ್ ಮುಬಾರಕ್ ಜುಮಾ ಮಸೀದಿ ಮತ್ತು ಅರ್ರಿಫಾಯಿಯಾ ನುಸ್ರತುಲ್ ಮುಸ್ಲಿಮೀನ್ ಅಸೋಸಿಯೇಶನ್ ವತಿಯಿಂದ 43ನೆ ವಾರ್ಷಿಕೋತ್ಸವದ ಅಂಗವಾಗಿ ಸ್ವಲಾತ್ ಮಜ್ಲಿಸ್, ರಿಫಾಈ ರಾತೀಬ್ ಮತ್ತು ಅರ್ತಾನ ದರ್ಗಾದ ನವೀಕೃತ ಕಟ್ಟಡದ ಉದ್ಘಾಟನಾ ಕಾರ್ಯಕ್ರಮವು ಬುಧವಾರ ಜರುಗಿತು.
ದರ್ಗಾದ ನವೀಕೃತ ಕಟ್ಟಡವನ್ನು ಇರ್ಶಾದ್ ಹುಸೈನ್ ದಾರಿಮಿ ಅಲ್ ಜಝರಿ ಮಿತ್ತಬೈಲ್ ಉದ್ಘಾಟಿಸಿ ಮಾತನಾಡಿದರು. ಮಸೀದಿಯ ಅಧ್ಯಕ್ಷ ಮುಹಮ್ಮದ್ ಮೋನು ಅಧ್ಯಕ್ಷತೆ ವಹಿಸಿದ್ದರು.ಖತೀಬ್ ಅಬ್ದುಸ್ಸಲಾಂ ಫೈಝಿ ಇರ್ಫಾನಿ ಪ್ರವಚನ ನೀಡಿದರು.
ವೇದಿಕೆಯಲ್ಲಿ ಹಯಾತುಲ್ ಇಸ್ಲಾಂ ಮದ್ರಸದ ಸದರ್ ಮುಅಲ್ಲಿಂ ಶಾಖಿರ್ ಹುಸೈನ್ ಮುಸ್ಲಿಯಾರ್, ಮುಅಝ್ಝಿನ್ ಅಬ್ದುಲ್ ಖಾದರ್ ಮುಸ್ಲಿಯಾರ್, ಮಸೀದಿಯ ಮಾಜಿ ಅಧ್ಯಕ್ಷ ಹಂಝ ಮಲಾರ್, ಉಪಾಧ್ಯಕ್ಷ ಡಿ. ಮುಹಮ್ಮದ್, ಕೋಶಾಧಿಕಾರಿ ಎನ್.ಕರೀಂ, ಕಾರ್ಯದರ್ಶಿ ದಾವೂದ್ ದೊಡ್ಡಮನೆ, ಮಾಜಿ ಪ್ರಧಾನ ಕಾರ್ಯದರ್ಶಿಗಳಾದ ಎಂ.ಪಿ.ಹಸನ್, ಟಿ. ನಾಸಿರ್ ಮಲಾರ್, ದಫ್ ಉಸ್ತಾದ್ ರಹೀಂ ಬದ್ರಿಯಾನಗರ ಉಪಸ್ಥಿತರಿದ್ದರು. ಮಸೀದಿಯ ಪ್ರಧಾನ ಕಾರ್ಯದರ್ಶಿ ಹಾಮದ್ ಅಲ್ತಾಫ್ ಸ್ವಾಗತಿಸಿದರು.