ಎ.11ರಿಂದ ಉಚಿತ ಫುಟ್ಬಾಲ್ ತರಬೇತಿ ಶಿಬಿರ
ಮಂಗಳೂರು, ಮಾ.28: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಉಳ್ಳಾಲ ಯೂತ್ ಸ್ಪೋರ್ಟ್ಸ್ ಅಕಾಡಮಿ ಹಾಗೂ ಉಳ್ಳಾಲ ಫುಟ್ಬಾಲ್ ಅಕಾಡಮಿಗಳ ಜಂಟಿ ಆಶ್ರಯದಲ್ಲಿ ಎಪ್ರಿಲ್ 11ರಿಂದ ಮೇ 11ರವರೆಗೆ 16ನೇ ವರ್ಷದ ಉಚಿತ ಫುಟ್ಬಾಲ್ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ.
ಈ ಫುಟ್ಬಾಲ್ ತರಬೇತಿ ಶಿಬಿರವು ಉಳ್ಳಾಲದ ಭಾರತ್ ಪ್ರೌಢಶಾಲಾ ಮೈದಾನದಲ್ಲಿ ಒಂದು ತಿಂಗಳ ಕಾಲ ನಡೆಯಲಿದೆ. ವಿದ್ಯಾರ್ಥಿಗಳು ತರಬೇತಿಯ ಪ್ರಯೋಜನ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 99640 27810, 99004 10900ನ್ನು ಸಂಪರ್ಕಿಸಲು ದ.ಕ. ಜಿಲ್ಲಾ ಕ್ರೀಡಾ ಅಭಿವೃದ್ಧಿ ಸಮಿತಿಯ ನಿರ್ದೇಶಕ ಸಾಜಿದ್ ಉಳ್ಳಾಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story