ಎಸೆಸೆಲ್ಸಿ: ಉಡುಪಿ ಜಿಲ್ಲೆಯ 180 ಮಂದಿ ಗೈರು
ಉಡುಪಿ, ಮಾ.29: ಉಡುಪಿ ಜಿಲ್ಲೆಯ ಒಟ್ಟು 51 ಪರೀಕ್ಷಾ ಕೇಂದ್ರಗಳಲ್ಲಿ ಶುಕ್ರವಾರ ನಡೆದ ಸಮಾಜ ವಿಜ್ಞಾನ ಪರೀಕ್ಷೆಗೆ ಒಟ್ಟು 180 ಮಂದಿ ಗೈರುಹಾಜರಾಗಿದ್ದಾರೆ. ಪರೀಕ್ಷೆಗಾಗಿ ಹೆಸರು ನೊಂದಾಯಿಸಿಕೊಂಡ 13,764 ವಿದ್ಯಾರ್ಥಿಗಳಲ್ಲಿ 13,584 ಮಂದಿ ಹಾಜರಾಗಿ 180 ಮಂದಿ ಗೈರುಹಾಜರಾ ಗಿದ್ದಾರೆ.
13,317 ರೆಗ್ಯುಲರ್ ಹಾಗೂ ರೆಗ್ಯುಲರ್ ಪುನರಾವರ್ತಿತ ವಿದ್ಯಾರ್ಥಿಗಳಲ್ಲಿ 13,191 ಮಂದಿ ಪರೀಕ್ಷೆ ಬರೆದು 126 ಮಂದಿ ಗೈರುಹಾಜರಾದರೆ, ಖಾಸಗಿ ಅಭ್ಯರ್ಥಿ ಗಳಾಗಿ ಹೆಸರು ನೊಂದಾಯಿಸಿಕೊಂಡ 447 ಮಂದಿಯಲ್ಲಿ 393 ಮಂದಿ ಹಾಜರಾಗಿ 54 ಮಂದಿ ಗೈರಾಗಿದ್ದಾರೆ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯ ಯಾವುದೇ ಪರೀಕ್ಷಾ ಕೇಂದ್ರದಿಂದ ಅಕ್ರಮ ಅಥವಾ ಅವ್ಯವಹಾರ ನಡೆದ ಬಗ್ಗೆ ವರದಿ ಬಂದಿಲ್ಲ ಎಂದು ಡಿಡಿಪಿಐ ತಿಳಿಸಿದ್ದಾರೆ.
Next Story