ನಗರಸಭೆ: ಆಸ್ತಿ ತೆರಿಗೆಯಲ್ಲಿ ಶೇ. 5 ರಿಯಾಯಿತಿ
ಉಡುಪಿ, ಮಾ. 30: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕಟ್ಟಡಗಳ ಮತ್ತು ಕೃಷಿಯೇತರ ನಿವೇಶನಗಳ ಮಾಲಕರು/ ಅನುಭೋಗ ದಾರರು 2019-20ನೇ ಸಾಲಿನ ಆಸ್ತಿ ತೆರಿಗೆಯನ್ನು ಎ.1ರಿಂದ 30ರ ಒಳಗೆ ಪಾವತಿಸಿದಲ್ಲಿ ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿಯಂತೆ ಶೇ.5 ರಿಯಾಯಿತಿ ದೊರೆಯಲಿದೆ.
ಆದುದರಿಂದ ತೆರಿಗೆದಾರರು ನಿಗದಿತ ಅವಧಿಯೊಳಗೆ ಆಸ್ತಿ ತೆರಿಗೆ ಪಾವತಿಸಿ ರಿಯಾಯಿತಿ ಪಡೆದುಕೊಳ್ಳುವಂತೆ ಹಾಗೂ 2018-19ನೇ ಸಾಲಿನ ತೆರಿಗೆ ಪಾವತಿಸದೇ ಬಾಕಿ ಇರುವವರು ಮಾ.31ರೊಳಗೆ ದಂಡನೆ ಸಮೇತ ತೆರಿಗೆ ಪಾವತಿಸಿ ನಗರಸಭೆಯೊಂದಿಗೆ ಸಹಕರಿಸುವಂತೆ ನಗರಸಭೆಯ ಪೌರಾಯುಕ್ತ ಆನಂದ ಕಲ್ಲೋಳಿಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story