ಅಕ್ರಮ ಸಾಗಾಟ: 14 ಜಾನುವಾರು ವಶ
ಕೋಟ, ಮಾ.30: ಪಿಕ್ಅಪ್ ವಾಹನದಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 14 ಜಾನುವಾರುಗಳನ್ನು ಕೋಟ ಪೊಲೀಸರು ಮಾ.30ರಂದು ನಸುಕಿನ ವೇಳೆ ನಂಚಾರು ಗ್ರಾಮದ ಕೊಳ್ಕೆಬೈಲು ಎಂಬಲ್ಲಿ ವಶಪಡಿಸಿಕೊಂಡಿದ್ದಾರೆ.
ಕೈಮೈಲ್ ಕಡೆಯಿಂದ ನಂಚಾರು ಕಡೆಗೆ ಬರುತ್ತಿದ್ದ ಬೈಕ್ ಸವಾರ ಹಾಗೂ ಸಹ ಸವಾರರು ಪೊಲೀಸರನ್ನು ನೋಡಿ ಬೈಕನ್ನು ರಸ್ತೆ ಬದಿ ನಿಲ್ಲಿಸಿ ಓಡಿ ಹೋದರು. ಅದೇ ಸಮಯದಲ್ಲಿ ಅದರ ಹಿಂದೆ ಬಂದ ಬೊಲೆರೋ ಪಿಕ್ಆಪ್ ವಾಹನವನ್ನು ಪೊಲೀಸರು ನಿಲ್ಲಿಸಲು ಸೂಚನೆ ನೀಡಿದಾಗ ಅದರಲ್ಲಿದ್ದ ಚಾಲಕ ಹಾಗೂ ಇತರರು ವಾಹನ ಬಿಟ್ಟು ಪರಾರಿಯಾದರೆನ್ನಲಾಗಿದೆ.
ಬಳಿಕ ಪೊಲೀಸರು ವಾಹನದಲ್ಲಿದ್ದ 14 ಜಾನುವಾರುಗಳನ್ನು ವಶಪಡಿಸಿ ಕೊಂಡಿದ್ದು, ಅದರಲ್ಲಿ ಮೂರು ಕರುಗಳು ಮೃತಪಟ್ಟಿದ್ದವು. ಜಾನುವಾರುಗಳ ಒಟ್ಟು ಮೌಲ್ಯ 46,000ರೂ. ಎಂದು ಅಂದಾಜಿಸಲಾಗಿದೆ. ಅದೇ ರೀತಿ 5,00,000ರೂ. ಮೌಲ್ಯದ ವಾಹನ ಮತ್ತು 20,000 ರೂ. ಮೌಲ್ಯದ ಬೈಕನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story