ಐಫೆಲ್ ಟವರ್ ಲೋಕಾರ್ಪಣೆ
1889: ಜಗತ್ಪ್ರಸಿದ್ಧ, ಫ್ರಾನ್ಸ್‌ನ ರಾಜಧಾನಿ ಪ್ಯಾರಿಸ್‌ನ ಸೌಂದರ್ಯವನ್ನು ಹೆಚ್ಚಿಸಿರುವ ಐಫೆಲ್ ಟವರ್ ಇಂದು ಅಧಿಕೃತವಾಗಿ ಲೋಕಾರ್ಪಣೆ ಗೊಂಡಿತು. ಫ್ರಾನ್ಸ್‌ನ ಇಂಜಿನಿಯರ್ ಗುಸ್ತಾವ್ ಐಫೆಲ್ ಎಂಬವರಿಂದ ನಿರ್ಮಿಸಲ್ಪಟ್ಟ ಇದು, 41 ವರ್ಷಗಳ ಕಾಲ ಮಾನವ ನಿರ್ಮಿತ ಅತ್ಯಂತ ಎತ್ತರದ ಗೋಪುರ ಎಂಬ ದಾಖಲೆಯನ್ನು ತನ್ನದಾಗಿಸಿಕೊಂಡಿತ್ತು.
1954: ನ್ಯಾಟೋ ಸೇರುವಂತೆ ಸೋವಿಯತ್ ರಶ್ಯಾಗೆ ನ್ಯಾಟೋದ ಸದಸ್ಯ ರಾಷ್ಟ್ರಗಳು ಆಹ್ವಾನ ನೀಡಿದವು.
1966: ವಿಯೆಟ್ನಾಂ ವಿರುದ್ಧ ಅಮೆರಿಕ ನಡೆಸುತ್ತಿದ್ದ ಯುದ್ಧವನ್ನು ವಿರೋಧಿಸಿ ನ್ಯೂಯಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಸುಮಾರು 25,000 ಜನರು ನಗರದಾದ್ಯಂತ ರ್ಯಾಲಿ ನಡೆಸಿದರು.
1966: ಸೋವಿಯತ್ ರಶ್ಯ ಲೂನಾ 10 ಎಂಬ ಬಾಹ್ಯಾಕಾಶ ನೌಕೆಯನ್ನು ಚಂದ್ರನ ಅಂಗಳಕ್ಕೆ ಉಡಾವಣೆ ಮಾಡಿತು.
1983: ಕೊಲಂಬಿಯಾದ ರಾಜಧಾನಿ ಪೋಪಯಾನ್‌ನಲ್ಲಿ ಸಂಭವಿಸಿದ ಪ್ರಬಲ ಭೂಕಂಪಕ್ಕೆ 267 ಜನ ಬಲಿಯಾದರು. ಸುಮಾರು 7,500 ಜನರು ಗಾಯಗೊಂಡ ವರದಿಯಾಗಿದೆ.
1991: ಸೋವಿಯತ್ ಒಕ್ಕೂಟ ಹಾಗೂ ಅದರ ನೆರೆಹೊರೆಯ ಯುರೋಪಿಯನ್ ದೇಶಗಳ ಮಧ್ಯೆ ಏರ್ಪಟ್ಟಿದ್ದ ವಾರ್ಸಾ ಸೈನಿಕ ಒಪ್ಪಂದ ಇಂದು ಅಂತ್ಯಗೊಂಡಿತು.
1992: ಲಿಬಿಯಾಗೆ ವಿಮಾನಗಳು ಹಾಗೂ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡುವುದರ ಮೇಲೆ ವಿಶ್ವಸಂಸ್ಥೆಯ ಭದ್ರತಾ ಸಮಿತಿ ನಿರ್ಬಂಧ ಹೇರಿತು.
1996: ತಮಿಳುನಾಡು ತಂಡದ ವಿರುದ್ಧ ಪ್ರಥಮ ಇನಿಂಗ್ಸ್ ಮುನ್ನಡೆಯ ಆಧಾರದ ಮೇಲೆ ಜಯ ಸಾಧಿಸಿದ ಕರ್ನಾಟಕ ಕ್ರಿಕೆಟ್ ತಂಡ 1996ರ ರಣಜಿ ಟ್ರೋಫಿಯನ್ನು ಜಯಿಸಿತು.
2017: ಕೊಲಂಬಿಯಾದ ಮೊಕೊವಾ ಎಂಬಲ್ಲಿ ಬಿದ್ದ ವ್ಯಾಪಕ ಮಳೆಯಿಂದ ಭೂ ಕುಸಿತ ಉಂಟಾಗಿ 200ಕ್ಕಿಂತ ಅಧಿಕ ಜನರು ಸಾವನ್ನಪ್ಪಿದರು.
1972: ಭಾರತದ ಪ್ರಖ್ಯಾತ ನಟಿ, ಸಿನೆಮಾ ದಂತಕತೆ ಮೀನಾಕುಮಾರಿ ನಿಧನ.
1934: ಮಾಧವಿ ಕುಟ್ಟಿ ಮತ್ತು ಕಮಲಾ ದಾಸ್ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾಗಿರುವ ಭಾರತೀಯ ಇಂಗ್ಲಿಷ್ ಹಾಗೂ ಮಲಯಾಳಂ ಲೇಖಕಿ ಕಮಲಾ ಸುರಯ್ಯ ಜನ್ಮದಿನ ಇಂದು.