ನಚ್ಚಬೆಟ್ಟು ದಾರುಲ್ ಮುಸ್ತಫಾ: ಎ.4ಕ್ಕೆ ವಾರ್ಷಿಕ ಮಹಾ ಸಮ್ಮೇಳನ, ಸ್ವಲಾತ್ ಮಜ್ಲಿಸ್
ಮಾಣಿ,ಎ.1: ದಾರುಲ್ ಮುಸ್ತಫಾ ಮೋರಲ್ ಅಕಾಡೆಮಿ ನಚ್ಚಬೆಟ್ಟು ಗಡಿಯಾರ ಇದರ ನಾಲ್ಕನೇ ಮಹಾ ಸಮ್ಮೇಳನ ಹಾಗೂ ಬೃಹತ್ ಸ್ವಲಾತ್ ಮಜ್ಲಿಸ್ ಎಪ್ರಿಲ್ 4 ರಂದು ಗುರುವಾರ ಸಂಸ್ಥೆಯ ವಠಾರದಲ್ಲಿ ನಡೆಯಲಿದೆ.
ಅಂದು ಬೆಳಿಗ್ಗೆ 8 ಗಂಟೆಯಿಂದ ರಿಫಾಈ ಮೌಲಿದ್, ಫ್ಯಾಮಿಲಿ ಮೀಟ್, ಅಲುಮ್ನಿ ಪ್ರೋಗ್ರಾಂ, ನೂತನ ಕಟ್ಟಡ ಉದ್ಘಾಟನೆ ಸೇರಿ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ಮಗ್ರಿಬ್ ನಮಾಝ್ ಬಳಿಕ ಸಮರೋಪ ಸಮಾರಂಭ ಜರುಗಲಿದೆ. ಹಂಝ ಮಿಸ್ಬಾಹಿ ಓಟ್ಟಪದವು ಮುಖ್ಯ ಪ್ರಭಾಷಣ ಮಾಡಲಿದ್ದು, ಸೆಯ್ಯಿದ್ ಬಾಯಾರ್ ತಂಙಳ್ ದುಆ ನೆರವೇರಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಸಂಸ್ಥೆಯ ಸಾರಥಿ ಟಿಎಂ ಮುಹ್ಯಿದ್ದೀನ್ ಕಾಮಿಲ್ ಸಖಾಫಿ ತೋಕೆ, ಹಂಝ ರಿಫಾಈ ತಂಙಳ್, ಮಹ್ಮೂದುಲ್ ಫೈಝಿ ವಾಲೆಮುಂಡೋವು, ಹಂಝ ಸಖಾಫಿ ಬಂಟ್ವಾಳ, ಅಲ್ ಹಾಜ್ ಅಬ್ದುರ್ರಹ್ಮಾನ್ ಮದನಿ ಮೂಳೂರು ಮುಂತಾದ ಹಲವಾರು ಉಲಮಾ ಉಮರಾ ನೇತಾರರು ಭಾಗವಹಿಸಲಿದ್ದಾರೆ ಎಂದು ಮಾಧ್ಯಮ ವಿಭಾಗ ಪ್ರಕಟಣೆಯಲ್ಲಿ ತಿಳಿಸಿದೆ.
Next Story