ಬಂಟ್ವಾಳ ತಾಲೂಕಿನ ವಿವಿಧೆಡೆ ಗಾಳಿ, ಸಿಡಿಲು ಸಹಿತ ಮಳೆ
ಬಂಟ್ವಾಳ, ಎ. 2: ತಾಲೂಕಿನ ವಿವಿಧೆಡೆ ಮಂಗಳವಾರ ಸಂಜೆ ಗಾಳಿ, ಸಿಡಿಲು ಸಹಿತ ಮಳೆಯಾಗಿದ್ದು, ಬಿಸಿಲ ಬೇಗೆಯಿಂದ ಬಳಲಿದ್ದ ಜನರಿಗೆ ಮಳೆ ತಂಪೆರೆದಿದೆ.
ಬಂಟ್ವಾಳ, ಬಿ.ಸಿ.ರೋಡ್, ಕೈಕಂಬ, ಮಾಣಿ, ಗಡಿಯಾರ, ಬುಡೋಳಿ ಉತ್ತಮ ಮಳೆಯಾದರೆ ಕಲ್ಲಡ್ಕ, ಮೆಲ್ಕಾರ್ನಲ್ಲಿ ತುಂತುರು ಮಳೆಯಾಗಿದೆ.
ಮಧ್ಯಾಹ್ನ ಎಂದಿನಂತೆ ಉರಿ ಬಿಸಿಲಿದ್ದರೆ ಸಂಜೆಯಾಗುತ್ತಿದ್ದಂತೆ ಮೋಡ ಕವಿದ ವಾತಾವರಣ ಉಂಟಾಗಿತ್ತು. ಮಾಣಿ, ಗಡಿಯಾರ, ಬುಡೋಳಿ, ಬಿ.ಸಿ.ರೋಡ್ ಪರಿಸರದಲ್ಲಿ ಧೂಳು ಸಹಿತ ಗಾಳಿ ಬೀಸಲಾರಂಭಿಸಿದ್ದು, ಗಾಳಿಯೊಂದಿಗೆ ಸಿಡಿಲಿನ ಶಬ್ದವೂ ಕೇಳಿ ಬಂತು.