ಕೋಡಿಬೆಂಗ್ರೆ: ಮೀನುಗಾರರಿಗೆ ಸ್ವೀಪ್ ಕಾರ್ಯಕ್ರಮ
ಉಡುಪಿ, ಎ.2: ಮೀನುಗಾರಿಕೆ ಇಲಾಖೆಯಿಂದ ಸ್ಥಳೀಯ ಮೀನುಗಾರರ ಸಂಘದ ಸಹಯೋಗದಲ್ಲಿ ಸೋಮವಾರ ಕೋಡಿಬೆಂಗ್ರೆ ಮೀನು ತಂಗುದಾಣ ದಲ್ಲಿ ಮೀನುಗಾರರಿಗಾಗಿ ಸ್ವೀಪ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಮತದಾರರಿಗೆ ಮತದಾನದ ಪ್ರತಿಜ್ಞಾ ವಿಧಿ ಬೋಧಿಸ ಲಾಯಿತು. ಅಲ್ಲದೇ ಸ್ಥಳೀಯ ಮೀನುಗಾರರಿಗೆ ಮತದಾನ ಯಂತ್ರಗಳಾದ ಇವಿಎಂ ಮತ್ತು ವಿವಿಪ್ಯಾಟ್ ಬಗ್ಗೆ ಪ್ರಾತ್ಯಕ್ಷತೆಯನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಮತದಾರರಿಗೆ ಮತದಾನದ ಪ್ರತಿಜ್ಞಾ ವಿಧಿ ಬೋಧಿಸ ಲಾಯಿತು. ಅಲ್ಲದೇ ಸ್ಥಳೀಯ ಮೀನುಗಾರರಿಗೆ ಮತದಾನ ಯಂತ್ರಗಳಾದ ಇವಿಎಂ ಮತ್ತು ವಿವಿಪ್ಯಾಟ್ ಬಗ್ಗೆ ಪ್ರಾತ್ಯಕ್ಷತೆಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕ ಪಿ.ಪಾರ್ಶ್ವನಾಥ್, ತಾಪಂ ಕಾರ್ಯನಿರ್ವಹಣಾಧಿಕಾರಿ ರಾಜು, ಸಹಾಯಕ ನಿರ್ದೇಶಕ ಹರಿಕೃಷ್ಣ ಶಿವತ್ತಾಯ, ಮೀನುಗಾರಿಕಾ ಸಹಾಯಕ ನಿರ್ದೇಶಕ ಕಿರಣ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸುಮಾರು 120ಕ್ಕೂ ಅಧಿಕ ಮೀನುಗಾರರು ಭಾಗವಹಿ ಸಿದ್ದರು.
Next Story