‘‘ರಾಜಕೀಯ ಹೊಲಸು. ಅದಕ್ಕೆ ನಾನು ಮತ ಹಾಕಲು ಹೋಗುವುದೇ ಇಲ್ಲ’’ ಯುವಕ ಹೆಮ್ಮೆಯಿಂದ ಹೇಳಿದ. ‘‘ಮನೆಯೊಳಗಿರುವ ಹೊಲಸನ್ನು ಶುಚಿಗೊಳಿಸಲು ಕಸಬರಿಕೆ ಎತ್ತದೆ, ಮನೆಯನ್ನು ದೂರಿದಂತಾಯಿತು ನಿನ್ನ ಮಾತು’’ ಆಗಷ್ಟೇ ಮತ ಹಾಕಿ ಬಂದ ವೃದ್ಧ ಹೇಳಿದ.