ಸಾಲಿಗ್ರಾಮ ಪಪಂ; ನಳ್ಳಿ ನೀರಿನ ಶುಲ್ಕ ಪಾವತಿಗೆ ಸೂಚನೆ
ಉಡುಪಿ, ಎ.3: ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಎಲ್ಲಾ ನಳ್ಳಿ ನೀರಿನ ಖಾತೆದಾರರು ಮತ್ತು ಅನುಭೋಗದಾರರು 2019ರ ಮಾರ್ಚ್ ತಿಂಗಳವರೆಗೆ ಬಾಕಿ ಇರುವ ನಳ್ಳಿ ನೀರಿನ ಶುಲ್ಕವನ್ನು ಪಾವತಿಸುವುದರೊಂದಿಗೆ, ಪ್ರತಿ ತಿಂಗಳ ಬಿಲ್ಲನ್ನು ಆಯಾ ತಿಂಗಳಲ್ಲೇ ಪಾವತಿಸಲು ಹಾಗೂ ಕಡ್ಡಾಯವಾಗಿ ಮೀಟರ್ ಅಳವಡಿಸಲು ಸೂಚಿಸಲಾಗಿದೆ.
ಈಗಾಗಲೇ ಬೇಸಿಗೆ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ವ್ಯತ್ಯಯ ಉಂಟಾಗಿರುವುದರಿಂದ ಕುಡಿಯುವ ನೀರನ್ನು ತೋಟಗಳಿಗೆ ಬಿಡದೇ ಮಿತವಾಗಿ ಬಳಸುವಂತೆ ಸಾಲಿಗ್ರಾಮ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story