ಅಹ್ಮದಾಬಾದ್ ಪೂರ್ವ ಕ್ಷೇತ್ರದಿಂದ ಪರೇಶ್ ರಾವಲ್ ಗೆ ಬಿಜೆಪಿ ಟಿಕೆಟ್ ಇಲ್ಲ
ಹೊಸದಿಲ್ಲಿ, ಎ.4: ಗುಜರಾತ್ ನ ಅಹ್ಮದಾಬಾದ್ ಪೂರ್ವ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಎಚ್.ಎಸ್. ಪಟೇಲ್ ರಿಗೆ ಟಿಕೆಟ್ ನೀಡಿದ್ದು, ನಟ, ಮೋದಿಯ ಕಟ್ಟಾ ಅಭಿಮಾನಿ ಪರೇಶ್ ರಾವಲ್ ರಿಗೆ ಟಿಕೆಟ್ ನಿರಾಕರಿಸಲಾಗಿದೆ.
2012 ಮತ್ತು 2017ರಲ್ಲಿ ಹಸ್ಮುಖ್ ಪಟೇಲ್ ಶಾಸಕರಾಗಿದ್ದಾರೆ. ಅಹ್ಮದಾಬಾದ್ ಪೂರ್ವ ಕ್ಷೇತ್ರದ ಹಾಲಿ ಸಂಸದರಾಗಿದ್ದಾರೆ ಪರೇಶ್ ರಾವಲ್ .
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಪರೇಶ್ ರಾವಲ್, “ನಾನು ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸುವುದಿಲ್ಲ ಎಂದು ನಾನು ಪಕ್ಷಕ್ಕೆ 4-5 ತಿಂಗಳುಗಳ ಹಿಂದೆಯೇ ತಿಳಿಸಿದ್ದೆ. ಆದರೆ, ಇದು ಅಂತಿಮವಾಗಿ ಪಕ್ಷದ ನಿರ್ಧಾರ” ಎಂದು ಹೇಳಿದ್ದಾರೆ.
Next Story