ಮಂಗಳೂರು, ಎ.4: ಜಿಲ್ಲಾ ಪ್ರಾಕೃತಿಕ ವಿಕೋಪ ನಿರ್ವಹಣಾ ಪ್ರಾಧಿಕಾರ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗಳ ಸಹಯೋಗದೊಂದಿಗೆ ಎ.8 ರಂದು ಪೂರ್ವಾಹ್ನ 10 ಗಂಟೆಗೆ ಫಾರಂ ಫಿಝ್ಝಾ ಮಾಲ್ ಆವರಣದಲ್ಲಿ ಕಟ್ಟಡ ಕುಸಿತ ಹಾಗೂ ನಗರ ಪ್ರವಾಹದ ಪೂರ್ವ ಸಿದ್ಧತೆಯ ಅಣುಕು ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಕಟನೆ ತಿಳಿಸಿದೆ.