ಎ.26: ಬಹರೈನ್ ನಲ್ಲಿ ದೇಯಿ ಬೈದೆತಿ ತುಳುಚಿತ್ರ ಪ್ರದರ್ಶನ
ಉಡುಪಿ, ಎ.5: ಸೂರ್ಯೋದಯ ಪೆರಂಪಳ್ಳಿ ನಿರ್ದೇಶನದ ಚೊಚ್ಚಲ ಚಲನಚಿತ್ರ ‘ದೇಯಿ ಬೈದೆತಿ’ ತುಳು ಚಿತ್ರವು ಎ.26ರಂದು ಅಪರಾಹ್ನ ಮೂರು ಗಂಟೆಗೆ ದ್ವೀಪ ರಾಷ್ಟ್ರ ಬಹರೈನ್ ನ ಮನಮದಲ್ಲಿರುವ ಅಲ್ ಹಮ್ರಾ ಸಿನಿಮಾ ಚಿತ್ರ ಮಂದಿರದಲ್ಲಿ ಪ್ರದರ್ಶನ ಕಾಣಲಿದೆ.
ಈ ಚಿತ್ರಕ್ಕಾಗಿ 500 ವರ್ಷಗಳ ಹಿಂದಿನ ಕಾಲಕ್ಕೆ ಸರಿಹೊಂದುವ ಭವ್ಯ ಮನೆಗಳ ಸೆಟ್’ಗಳನ್ನು ನಿರ್ಮಿಸಲಾಗಿದೆ. ಆ ಕಾಲದ ಕರ್ನಾಟಕ ಕರಾವಳಿಗರ ಜನಜೀವನ, ಆಚಾರ ವಿಚಾರ, ಉಡುಗೆ ತೊಡುಗೆಗಳ ಓರಣಗಳನ್ನು, ತುಳು ನಾಡಿನ ಅಗೋಚರ ಸಂಪ್ರದಾಯಗಳ ಕಟ್ಟುಪಾಡುಗಳನ್ನು ಈ ಚಿತ್ರದಲ್ಲಿ ಬಿಂಬಿಸಲಾಗಿದೆ.
ಈ ಚಿತ್ರದ ಸಾಹಿತ್ಯ, ಚಿತ್ರಕಥೆ, ಸಂಭಾಷಣೆ, ನಿರ್ಮಾಣ ಹಾಗೂ ನಿರ್ದೇಶನವನ್ನು ಸೂರ್ಯೋದಯ್ ಪೆರಂಪಳ್ಳಿರವರೇ ನಿರ್ವಹಿಸಿದ್ದಾರೆ. ಟಿಕೆಟ್ಗಳು ಹಾಗು ಹೆಚ್ಚಿನ ಮಾಹಿತಿಗಾಗಿ ಬಹರೇನ್ ಬಿಲ್ಲವಾಸ್ ಅಧ್ಯಕ್ಷ ಸುರೇಂದ್ರ ಉದ್ಯಾವರ(ಮೊಬೈಲ್-00973 39582392) ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
Next Story