ಕಟಪಾಡಿ: ಮನೆಗೆ ನುಗ್ಗಿದ ಅಪರಿಚಿತ ವ್ಯಕ್ತಿಯಿಂದ ಹಲ್ಲೆ, ಬೆದರಿಕೆ
ಕಾಪು, ಎ.5: ಮನೆಗೆ ನುಗ್ಗಿದ ಅಪರಿಚಿತ ವ್ಯಕ್ತಿಯೊಬ್ಬ ಹಲ್ಲೆ ನಡೆಸಿ, ಕಿಟಕಿ ಗಾಜು ಹಾಗೂ ಮನೆಯ ಎದುರು ನಿಲ್ಲಿಸಿದ ರಿಕ್ಷಾದ ಗಾಜು ಒಡೆದು ಬೆದರಿಕೆ ಹಾಕಿರುವ ಘಟನೆ ಕಟಪಾಡಿ ಏಣಗುಡ್ಡೆ ಎಂಬಲ್ಲಿ ಎ. 4ರಂದು ಬೆಳಗ್ಗೆ ನಡೆದಿದೆ.
ಲೀಲಾ ಎನ್.ಶೆಟ್ಟಿ(86) ಎಂಬವರು ಮನೆಯಲ್ಲಿ ಒಂಟಿಯಾಗಿ ವಾಸ ವಾಗಿದ್ದು, 50 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಯೊಬ್ಬ ಮನೆಯ ಒಳಗಡೆ ಬಂದಿದ್ದನು. ಈ ವೇಳೆ ಕೆಲಸದ ಮಹಿಳೆ ಆತನನ್ನು ದೂಡಿದ್ದು, ಆಗ ಆತ ಮನೆಯ ಮೂರು ಕಿಟಕಿಯ ಬಾಗಿಲನ್ನು ಹಾಗೂ ಮನೆಯ ಸಮೀಪ ಬಂದಿದ್ದ ಆಟೋರಿಕ್ಷಾದ ಎದುರಿನ ಗ್ಲಾಸನ್ನು ಒಡೆದು ಹಾಕಿದನು ಎಂದು ತಿಳಿದುಬಂದಿದೆ.
ಈ ಸಂದರ್ಭ ಮನೆಯವರು ಬೊಬ್ಬೆ ಹಾಕಿದಾಗ ನೆರಮನೆಯ ಪ್ರಕಾಶ್ ಎಂಬಾತನು ಅಲ್ಲಿಗೆ ಬಂದಿದ್ದು ಆ ಅಪರಿಚಿತ ವ್ಯಕ್ತಿಯು ಪ್ರಕಾಶ್ ಹಾಗೂ ರಿಕ್ಷಾ ಚಾಲಕನಿಗೂ ಹೊಡೆದು ದೂಡಿ ಹಾಕಿ ಹೋಗಿರುವುದಾಗಿ ದೂರ ಲಾಗಿದೆ. ಮನೆಯ ಮತ್ತು ರಿಕ್ಷಾದ ಗ್ಲಾಸ್ಗಳನ್ನು ಒಡೆದು ಹಾಕಿದ ಪರಿಣಾಮ 7000ರೂ. ನಷ್ಟ ಉಂಟಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story