ಕಡಬ: ಮರ ಬಿದ್ದು ಮನೆ, ರಿಕ್ಷಾ, ಬೈಕ್ ಜಖಂ
ಕಡಬ, ಎ. 6: ಇಲ್ಲಿನ ಕೇವಳ ಎಂಬಲ್ಲಿ ಮನೆಯ ಮೇಲೆ ಮರ ಬಿದ್ದ ಪರಿಣಾಮ ಮನೆಯ ಮೇಲ್ಛಾವಣಿ ಹಾಗೂ ಸಮೀಪ ನಿಲ್ಲಿಸಿದ್ದ ಅಟೋ ರಿಕ್ಷಾ, ಬೈಕ್ ಜಖಂಗೊಂಡ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಕೇವಳ ನಿವಾಸಿ ವಿಶ್ವನಾಥ ಗೌಡರ ಮನೆಯ ಸಮೀಪ ಇರುವ ಮಾವಿನ ಮರದ ಬೃಹತ್ ಗೆಲ್ಲು ಮುರಿದು ಬಿದ್ದು ಮನೆಯ ಮೇಲ್ಛಾವಣಿ ಬಿದ್ದಿದೆ. ಅಲ್ಲದೆ ಮನೆಯ ವರಾಂಡದಲ್ಲಿ ನಿಲ್ಲಿಸಿದ್ದ ಅಟೋ ರಿಕ್ಷಾ ಹಾಗೂ ಬೈಕ್ ಸಂಪೂರ್ಣ ಜಖಂಗೊಂಡಿದೆ. ಈ ಸಂದರ್ಭದಲ್ಲಿ ಮನೆಯವರು ಮನೆಯೊಳಗೆ ಇದ್ದು ಅದೃಷ್ಟ ವಶಾತ್ ಜೀವಾಪಾಯದಿಂದ ಪಾರಾಗಿದ್ದಾರೆ.
ಸ್ಥಳಕ್ಕೆ ಗ್ರಾಮಕರಣಿಕರು, ಗ್ರಾಮ ಸಹಾಯಕರು ಭೇಟಿ ನೀಡಿದ್ದಾರೆ.