ಮೂಡುಬಿದಿರೆ : ಕುಸಿದು ಬಿದ್ದು ಯುವಕ ಮೃತ್ಯು
ಮೂಡುಬಿದಿರೆ : ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ಯುವಕನೋರ್ವ ಕುಸಿದು ಬಿದ್ದು ಮೃತಪಟ್ಟ ಘಟನೆ ಪಾಲಡ್ಕದಲ್ಲಿ ಶನಿವಾರ ನಡೆದಿದೆ.
ಪಾಲಡ್ಕದ ಸಂಜೀವ ನಾಯಕ್ ಎಂಬವರ ಪುತ್ರ ರವಿಚಂದ್ರ ನಾಯಕ್ (27) ಮೃತರು ಎಂದು ಗುರುತಿಸಲಾಗಿದೆ.
ರವಿಚಂದ್ರ ಪಾಲಡ್ಕದಲ್ಲಿ ಕಬ್ಬಿಣದ ವೆಲ್ಡಿಂಗ್ ಕೆಲಸ ಮಾಡುತ್ತಿದ್ದಾಗ ಕುಸಿದುಬಿದ್ದನೆನ್ನಲಾಗಿದೆ. ತಕ್ಷಣ ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಿದರು ದಾರಿ ಮಧ್ಯೆ ಮೃತಪಟ್ಟರು ಎಂದು ತಿಳಿದುಬಂದಿದ್ದು, ಈ ಬಗ್ಗೆ ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story