ಮೂಡುಬಿದಿರೆ : ಯುವಕ ನಾಪತ್ತೆ
ಮೂಡುಬಿದಿರೆ : ಹತ್ತು ತಿಂಗಳ ಹಿಂದೆ ಮಂಗಳೂರಿಗೆ ಕೆಲಸಕ್ಕೆ ಹೋಗುತ್ತೇನೆಂದು ಕಲ್ಲಮುಂಡ್ಕೂರಿನಿಂದ ಹೋಗಿದ್ದ ಯುವಕನೋರ್ವ ಮನೆಗೆ ಬಾರದೆ ಸಂಬಂಧಿಕರ ಮನೆಗೂ ಹೋಗದೆ ನಾಪತ್ತೆಯಾದ ಘಟನೆ ಮೂಡುಬಿದಿರೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕಲ್ಲಮುಂಡ್ಕೂರಿನ ಬರ್ಕೆಬೆಟ್ಟು ನಿವಾಸಿ ಆ್ಯಂಡ್ರೋ ಪಿಂಟೋ ಅವರ ಪುತ್ರ ಆಂತೋನಿ ಪಿಂಟೋ (21) ನಾಪತ್ತೆಯಾದ ಯುವಕ.
ಈತ ಕೆಟರಿಂಗ್ ಕೆಲಸಕ್ಕೆ ಹೋಗುತ್ತಿದ್ದು, ನಾಪತ್ತೆಯಾದ ದಿನ ಮಂಗಳೂರಿಗೆ ಕೆಲಸಕ್ಕೆಂದು ಹೋಗಿದ್ದು, ನಂತರ ಮನೆಗೆ ಹಿಂತಿರುಗದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story