ತಾನು ಶ್ರೀಮಂತ ಎಂದು ದೃಢಪಡಿಸಲು 69.23 ಕೋ. ರೂ. ವಿತ್ ಡ್ರಾ ಮಾಡಿದ ಭೂಪ!
ಹೊಸದಿಲ್ಲಿ, ಎ.7: ಆಫ್ರಿಕಾದ ಅತ್ಯಂತ ಶ್ರೀಮಂತ ವ್ಯಕ್ತಿ ಅಲಿಕೊ ದಾಂಗೋಟ್ ಎಂಬವರು ತಾನು ನಿಜವಾಗಿಯೂ ಎಷ್ಟು ಶ್ರೀಮಂತ ಎಂದು ದೃಢಪಡಿಸುವ ಸಲುವಾಗಿ 69.23 ಕೋಟಿ ರೂಪಾಯಿಗಳನ್ನು ಖಾತೆಯಿಂದ ವಿತ್ ಡ್ರಾ ಮಾಡಿದ ಕುತೂಹಲಕಾರಿ ಘಟನೆ ವರದಿಯಾಗಿದೆ.
ತಾನು ಕೇವಲ ಅಂಕಿಸಂಖ್ಯೆಯಲ್ಲಿ ಮಾತ್ರವಲ್ಲ, ನಿಜವಾಗಿಯೂ ತನ್ನ ಬಳಿ ಎಷ್ಟು ಸಂಪತ್ತಿದೆ ಎಂದು ತೋರಿಸುವುದು ಇವರ ಉದ್ದೇಶವಾಗಿತ್ತು ಎನ್ನಲಾಗಿದೆ.
ಉತ್ಪಾದನಾ ಕ್ಷೇತ್ರದ ದಿಗ್ಗಜ ಎನಿಸಿಕೊಂಡಿರುವ ದಂಗೊಟ್ ಸಿಮೆಂಟ್‍ನಿಂದ ಹಿಡಿದು ಅಕ್ಕಿಪುಡಿವರೆಗೂ ಹಲವು ಗ್ರಾಹಕ ವಸ್ತುಗಳ ಉತ್ಪಾದನೆಯಲ್ಲಿ ತೊಡಗಿಸಿಕೊಂಡಿದ್ದಾರೆ.
"ಒಂದು ದಿನ ನಾನು 10 ದಶಲಕ್ಷ ಡಾಲರ್ ಹಣವನ್ನು ನನ್ನ ಕಾರಿನ ಡಿಕ್ಕಿಯಲ್ಲಿ ತುಂಬಿಕೊಂಡು ಬಂದು ಕೊಠಡಿಯಲ್ಲಿ ಇಟ್ಟುಕೊಂಡೆ. ಅದನ್ನು ನೋಡಿ, ನನ್ನಲ್ಲಿ ಹಣ ಇರುವುದು ನಿಜಕ್ಕೂ ಖಾತ್ರಿಯಾಯಿರು. ಮರುದಿನ ಅದನ್ನು ಬ್ಯಾಂಕಿಗೆ ಜಮೆ ಮಾಡಿದೆ" ಎಂದು ಅವರು ಹೇಳಿಕೊಂಡಿದ್ದಾರೆ.
Next Story