ಮೂಡುಶೆಡ್ಡೆ: ಮಲಗುವ ವೇಳೆ ಉರಿಸಿಟ್ಟಿದ್ದ ಮೊಂಬತ್ತಿ ಬೆಂಕಿ ತಗುಲಿ ಮಹಿಳೆ ಮೃತ್ಯು
ಮಂಗಳೂರು, ಎ.7: ಮಂಚದ ಬಳಿ ಮೊಂಬತ್ತಿ ಉರಿಸಿಟ್ಟು ಮಲಗಿದ್ದ ವೇಳೆ ಆಕಸ್ಮಿಕವಾಗಿ ಬೆಂಕಿ ಮೈಗೆ ಹತ್ತಿಕೊಂಡ ಪರಿಣಾಮ ಗಂಭೀರ ಗಾಯಗೊಂಡಿದ್ದ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಮೂಡುಶೆಡ್ಡೆ ಸಮೀಪದ ಶಾಲೆಪದವು ಎಂಬಲ್ಲಿ ರವಿವಾರ ಸಂಭವಿಸಿದೆ.
ಮೂಡುಶೆಡ್ಡೆ ಶಾಲೆಪದವು ಪ್ರೇಮಾ (46) ಮೃತರು.
ಎ.2ರಂದು ರಾತ್ರಿ ಈ ಘಟನೆ ನಡೆದಿದೆ. ಪ್ರೇಮಾ ಅಂದು ರಾತ್ರಿ ಊಟ ಮಾಡಿ ಮಲಗುವ ಸಂದರ್ಭ ಮಂಚದ ಕೆಳಗೆ ಮೊಂಬತ್ತಿ ಉರಿಸಿಟ್ಟಿದ್ದರೆನ್ನಲಾಗಿದೆ. ನಿದ್ದೆಯಲ್ಲಿದ್ದ ವೇಳೆ ಪ್ರೇಮಾ ಧರಿಸಿದ್ದ ವಸ್ತ್ರಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಬೊಬ್ಬೆ ಕೇಳಿ ಅವರನ್ನು ರಕ್ಷಿಸಿ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ಸುಟ್ಟ ಗಾಯಗಳೊಂದಿಗೆ ಗಂಭೀರ ಸ್ಥಿತಿಯಲ್ಲಿದ್ದ ಪ್ರೇಮಾ ಚಿಕಿತ್ಸೆ ಫಲಕಾರಿಯಾಗದೆ ರವಿವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story