ಪಚ್ಚಂಬಳದಲ್ಲಿ ಯಶಸ್ವಿ ರಕ್ತದಾನ ಶಿಬಿರ
ಮಂಜೇಶ್ವರ: ಫ್ರೆಂಡ್ಸ್ ಪಚ್ಚಂಬಳ ಆರ್ಟ್ಸ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್, ಲೈಬ್ರರಿ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು ಜಂಟಿಯಾಗಿ ವಿಶ್ವ ಆರೋಗ್ಯ ದಿನಾಚರಣೆಯ ಪ್ರಯುಕ್ತ ಬೃಹತ್ ರಕ್ತದಾನಶಿಬಿರ ಪಚ್ಚಂಬಳ ಟೌನ್ ನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಪಡಿತರ ಸಹಾಯಕ ಅಧಿಕಾರಿ ಸಿರಾಜ್ ಉದ್ಘಾಟಿಸಿ ನಂತರ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ 70 ರಕ್ತದಾನಿಗಳು ಸ್ವಯಂ ಪ್ರೇರಿತ ವಾಗಿ ರಕ್ತದಾನ ಮಾಡಿದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಬ್ಲಡ್ ಡೋನರ್ಸ್ ಮಂಗಳೂರು ಇದರ ಅಧ್ಯಕ್ಷರಾದ ಸಿದ್ದೀಕ್ ಮಂಜೇಶ್ವರ, ಬ್ಲಡ್ ಡೋನರ್ಸ್ ಸದಸ್ಯರಾದ ಅಸೀಬ್ ಮುಟ್ಟಮ್, ಬ್ಲಡ್ ಡೋನರ್ಸ್ ಮಂಗಳೂರು ಇದರ ಪ್ರಚಾರಕ ಮಾಸ್ಟರ್ ಫಾಝಿಲ್, ಬ್ಲಡ್ ಡೋನರ್ಸ್ ಮಂಗಳೂರು ಇದರ ಮುಖ್ಯ ಕಾರ್ಯನಿರ್ವಾಹಕ ಫಾರೂಕ್ ಬಿಗ್ ಗ್ಯಾರೇಜ್, ರೆಡ್ ಕ್ರಾಸ್ ಬ್ಲಡ್ ಬ್ಯಾಂಕ್ ತಂಡದ ಎಡ್ವರ್ಡ್, ಪ್ರವೀಣ್, ಫ್ರೆಂಡ್ಸ್ ಪಚ್ಚಂಬಳ ಇದರ ಸದಸ್ಯರು ಉಪಸ್ಥಿತ ರಿದ್ದರು.
ಈ ಕಾರ್ಯಕ್ರಮದಲ್ಲಿ ರಕ್ತದಾನ ಮಾಡಿದ ಪ್ರತಿಯೊಬ್ಬ ಸದಸ್ಯರನ್ನು ಬ್ಲಡ್ ಡೋನರ್ಸ್ ಮಂಗಳೂರು ಇದರ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಸಮಾಜ ಸೇವಕ ಮಜೀದ್ ಪಚ್ಚಂಬಳ ಕಾರ್ಯಕ್ರಮ ನಿರೂಪಿಸಿದರು. ಫ್ರೆಂಡ್ಸ್ ಪಚ್ಚಂಬಳ ಇದರ ಸದಸ್ಯ ಹನೀಫ್ ಪಚ್ಚಂಬಳ ವಂದಿಸಿದರು.