ಮೋದಿ ಮೇಕಪ್ ಮಾಡಿಕೊಳ್ಳುವುದರಿಂದ ಅವರನ್ನೆ ಮಾಧ್ಯಮಗಳು ತೋರಿಸುತ್ತವೆ: ಕುಮಾರಸ್ವಾಮಿ
ಬೆಂಗಳೂರು, ಎ. 9: ‘ಮೋದಿ ಬೆಳಗ್ಗೆ ಎದ್ದ ಕೂಡಲೇ ಮೇಕಪ್ ಮಾಡಿಕೊಳ್ಳುತ್ತಾರೆ. ಮುಖ ಹೊಳೆಯುವುದಕ್ಕಾಗಿ ವ್ಯಾಕ್ಸ್ ಮಾಡಿಕೊಳ್ಳುತ್ತಾರೆ. ಆಮೇಲೆ ಕ್ಯಾಮರಾ ಮುಂದೆ ಕೂರುತ್ತಾರೆ’ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.
ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ನಾವು ಬೆಳಗ್ಗೆ ಒಂದು ಬಾರಿ ಸ್ನಾನ ಮಾಡಿದರೆ ಮತ್ತೆ ಮರುದಿನವೇ ಮುಖ ತೊಳೆಯುವುದು. ಹೀಗಾಗಿ ಕ್ಯಾಮರಾದಲ್ಲಿ ನಮ್ಮ ಮುಖ ಚೆನ್ನಾಗಿ ಕಾಣುವುದಿಲ್ಲ. ಆದುದರಿಂದ ಮಾಧ್ಯಮಗಳು ಮೋದಿಯವರನ್ನೇ ತೋರಿಸುತ್ತವೆ ಎಂದು ಹೇಳಿದರು.
ಏರ್ ಸ್ಟ್ರೈಕ್ ಮಾಡಿದ್ದರೆ ಪ್ರಧಾನಿ ಮೋದಿ ತಮ್ಮ ಬೆನ್ನು ತಾವೇ ಏಕೆ ತಟ್ಟಿಕೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ ಕುಮಾರಸ್ವಾಮಿ, ನರೇಂದ್ರ ಮೋದಿ ಹೋದಲ್ಲಿ- ಬಂದಲ್ಲಿ ಸುಳ್ಳು ಭಾಷಣ ಮಾಡುತ್ತಿದ್ದು, ಈ ಬಾರಿ ರಾಜ್ಯದಲ್ಲಿ ಬಿಜೆಪಿ ಸೋಲು ನಿಶ್ಚಿತ ಎಂದು ಭವಿಷ್ಯ ನುಡಿದರು.
Next Story