ಆಳ್ವಾಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ `ಮೆಕ್ ಎರಾ -19-ಮೆಕ್ಸ್ ಟೋರ್ಮ್'
ವಾರ್ಷಿಕ ಮೆಕ್ಯಾನಿಕಲ್ ಹಬ್ಬ ಆರಂಭ
ಮೂಡುಬಿದಿರೆ : ಆಳ್ವಾಸ್ ಇನ್ಸ್ ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯಲ್ಲಿ ಎರಡು ದಿನಗಳ ಕಾಲ ನಡೆಯುವ `ಮೆಕ್ ಎರಾ-19 ಮೆಕ್ಸ್ ಟೋರ್ಮ್ ' ವಾರ್ಷಿಕ ಮೆಕ್ಯಾನಿಕಲ್ ಹಬ್ಬವನ್ನು ಅದಾನಿ ಗ್ರೂಪ್ ಹಾಗೂ ಬೆಂಗಳೂರು ಚೇಂಬರ್ ಆಫ್ ಇಂಡಸ್ಟ್ರಿ ಆ್ಯಂಡ್ ಕಾಮರ್ಸ್ ನ ಅಧ್ಯಕ್ಷ ಕಿಶೋರ್ ಆಳ್ವ ಮಂಗಳವಾರ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಮೆಕ್ಯಾನಿಕಲ್ ಎಂಜಿನಿಯರಿಂಗ್ನಲ್ಲಿ ಕ್ರಿಯಾತ್ಮಕತೆಗೆ, ಹೆಚ್ಚು ಮಾನವ ಚಟುವಟಿಕೆಗಳಿಗೆ ಅವಕಾಶಗಳಿವೆ, ಪರಿಶ್ರಮ ಪಟ್ಟರೆ ಈ ವಿಭಾಗದಲ್ಲಿರುವ ಸ್ಪರ್ಧಾತ್ಮಕ ಅವಕಾಶಗಳಿಗೆ ತೆರೆದುಕೊಳ್ಳಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಅವರು, `ಚೀನಾ ದೇಶವು ಮೆಕ್ಯಾನಿಕಲ್ ವಿಭಾಗದಲ್ಲಿ ತೋರಿದ ಕ್ಷಮತೆ, ಸಾಧನೆಯಿಂದ ಜಗತ್ತಿನಲ್ಲೇ ಎದ್ದು ಕಾಣಿಸುವಂತಾಗಿದೆ; ಈ ವಿಭಾಗದ ಧನಾತ್ಮಕ ಅಂಶಗಳನ್ನು ನಾವು ಅರಿತುಕೊಳ್ಳಬೇಕಾಗಿದೆ' ಎಂದರು.
ಆಳ್ವಾಸ್ ಎಜ್ಯುಕೇಶನ್ ಫೌಂಡೇಶನ್ನ ಟ್ರಸ್ಟಿ ವಿವೇಕ ಆಳ್ವ ಅಧ್ಯಕ್ಷತೆ ವಹಿಸಿ ಮಾತನಾಡಿ 'ಮೆಕ್ಯಾನಿಕಲ್ ಎಂಜಿನಿಯರಿಂಗ್ ಕಲಿತವರಿಗೆ ಭವಿಷ್ಯದಲ್ಲಿ ಉದ್ಯೋಗ ಸಿಗುವುದಿಲ್ಲ ಎಂಬುದು ಸತ್ಯಕ್ಕೆ ದೂರವಾದ ಸಂಗತಿ. ಮೆಕ್ಯಾನಿಕಲ್ ಎಂಜಿನಿಯರಿಂಗ್ ಎಂಬುದು ಎಲ್ಲ ಎಂಜಿನಿಯರಿಂಗ್ ಶಾಖೆಗಳಿಗೆ ತಾಯಿ ಇದ್ದ ಹಾಗೆ' ಎಂದು ಹೇಳಿದರು.
ವಿಭಾಗ ಮುಖ್ಯಸ್ಥ ಡಾ. ಹರೀಶ್ ಆನಂದ ಕೆ. ಎಸ್. ಸ್ವಾಗತಿಸಿದರು. ವಿಜಯಲಕ್ಷ್ಮಿ ನಿರೂಪಿಸಿದರು. ಡಾ. ಸತ್ಯನಾರಾಯಣ ವಂದಿಸಿದರು. ಪ್ರಬಂಧ ಮಂಡನೆ, ಸ್ಕೆಚಿಂಗ್, ಟೆಕ್ನಿಕಲ್ ಕ್ವಿಜ್, ಜ್ಞಾಪಕ ಶಕ್ತಿ, ಸ್ಕ್ರಾಪ್ ವೆಲ್ಡಿಂಗ್, ಅಟೋ ಪಾರ್ಟ್ಸ್ ಐಡೆಂಟಿಫಿಕೇಶನ್, ಪೋಸ್ಟರ್ ರಚನೆ, ರೋಬೋ ಕಾರ್ವಾರ್,
ಅಟೋಮೊಬೈಲ್, ಫೋಟೋಗ್ರಫಿ, ನಿಧಿ ಶೋಧ ಮೊದಲಾದ ಸ್ಪರ್ಧೆಗಳನ್ನು ಇರಿಸಲಾಗಿತ್ತು.