ಎ 11: ಎಸ್ಸೆಸ್ಸೆಫ್ ಮುಡಿಪು ಡಿವಿಷನ್ ನಿಂದ ಕಡತ ನಿರ್ವಹಣಾ ತರಬೇತಿ
ಮುಡಿಪು, ಎ.10: ಎಸ್ಸೆಸ್ಸೆಫ್ ಮುಡಿಪು ಡಿವಿಷನ್ ವತಿಯಿಂದ ಡಿವಿಷನ್, ಸೆಕ್ಟರ್ ಹಾಗೂ ಯುನಿಟ್ ಗಳ ಪ್ರಧಾನ ಕಾರ್ಯದರ್ಶಿಗಳಿಗಾಗಿ ಕಡತ ನಿರ್ವಹಣಾ ತರಬೇತಿ ಎ.11ರಂದು ರಾತ್ರಿ 7 ಗಂಟೆಗೆ ಸಾಂಬರತೋಟ ಮದ್ರಸ ಹಾಲ್ ನಲ್ಲಿ ನಡೆಯಲಿದೆ.
ಎಸ್ಸೆಸ್ಸೆಫ್ ಮುಡಿಪು ಡಿವಿಷನ್ ಅಧ್ಯಕ್ಷ ತೌಸೀಫ್ ಸ ಅದಿ ಹರೇಕಳ ಅಧ್ಯಕ್ಷತೆ ವಹಿಸಲಿದ್ದಾರೆ. ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಎಸ್ಸೆಸ್ಸೆಫ್ ರಾಷ್ಟ್ರೀಯ ಸಮಿತಿ ಸದಸ್ಯ ಕೆ.ಎಂ ಅಬೂಬಕರ್ ಸಿದ್ದೀಕ್ ಮೋಂಟುಗೋಳಿ ಕಡತ ನಿರ್ವಹಣಾ ತರಬೇತಿ ನೀಡುವರು ಎಂದು ಪ್ರಕಟನೆ ತಿಳಿಸಿದೆ.
Next Story