ಕುಂದಾಪುರ: ಇವಿಎಂ ಮತಯಂತ್ರಗಳಿಗೆ ಅಭ್ಯರ್ಥಿಗಳ ಹೆಸರುಗಳ ಜೋಡಣೆ
ಉಡುಪಿ, ಎ.10: ಉಡುಪಿ-ಚಿಕ್ಕಮಗಳೂರು ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಅಂತಿಮವಾಗಿ ಕಣದಲ್ಲಿರುವ 12 ಮಂದಿ ಅ್ಯರ್ಥಿಗಳ ಹೆಸರುಗಳ ಜೋಡಣೆ ಕಾರ್ಯವನ್ನು ಕುಂದಾಪುರ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳ ಮಾರ್ಗದರ್ಶನದಲ್ಲಿ ಬುಧವಾರ ಕುಂದಾಪುರದ ಭಂಡಾರಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ವಿವಿಧ ರಾಜಕೀಯ ಪಕ್ಷಗಳ ಏಜೆಂಟ್ರ ಸಮ್ಮುಖದಲ್ಲಿ ನಡೆಯಿತು.
ಕುಂದಾಪುರ ವಿಧಾನಸಬಾ ಕ್ಷೇತ್ರಕ್ಕೆ ಅಗತ್ಯವಿರುವ 222 ಮತಗಟ್ಟೆಗಳಿಗೆ ಹಾಗೂ ಹೆಚ್ಚುವರಿಯಾಗಿ ಇವಿಎಂ ಮತಯಂತ್ರಗಳಿಗೆ ಕ್ಯಾಂಡಿಡೇಟ್ ಸೆಟ್ಟಿಂಗ್ ಬಗ್ಗೆ 26 ಸೆಕ್ಟರ್ ಅಧಿಕಾರಿಗಳು/ ಮೇಲ್ವಿಚಾರಕರ ನೇತೃತ್ವದಲ್ಲಿ 26 ಟೇಬಲ್ ಗಳಲ್ಲಿ ತಲಾ 10 ಸುತ್ತುಗಳಲ್ಲಿ ಒಟ್ಟು 270 ಮತಯಂತ್ರಗಳಿಗೆ ಕ್ಯಾಂಡಿಡೇಟ್ ಸೆಟ್ಟಿಂಗ್ ಕಾರ್ಯ ನಡೆಸಿ, ಹಾಗೂ 15 ಮತಯಂತ್ರಗಳಲ್ಲಿ (ಒಟ್ಟು ಮತ ಯಂತ್ರದ ಶೇ.5ರಷ್ಟು) 1000 ಅಣಕು ಮತದಾನ ನಡೆಸಿ ತದನಂತರ ಬಿಗು ಪೊಲೀಸ್ ಬಂದೋಬಸ್ತಿನೊಂದಿಗೆ ಬದ್ರತಾ ಕೊಠಡಿಯಲ್ಲಿ ದಾಸ್ತಾನು ಇರಿಸಲಾಯಿತು.
ಈ ಸಂದರ್ಭದಲ್ಲಿ ಕುಂದಾಪುರ ಮತ್ತು ಬ್ರಹ್ಮಾವರದ ತಹಶೀಲ್ದಾರರು ಉಪಸ್ಥಿತರಿದ್ದರು.