ಎ. 14: ಎಸ್ಸೆಸ್ಸೆಫ್ ಉಳ್ಳಾಲ ಡಿವಿಶನ್ ವತಿಯಿಂದ 'ದಱ್'ವಾ ಕಾನ್ಫರೆನ್ಸ್'
ಉಳ್ಳಾಲ: ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ ಫೆಡರೇಶನ್ ರಾಜ್ಯಾದ್ಯಂತ ಹಮ್ಮಿಕೊಂಡಿರುವ 'ದಱ್'ವಾ ಕಾನ್ಫರೆನ್ಸ್ 19' ಉಳ್ಳಾಲ ಡಿವಿಶನ್ ವತಿಯಿಂದ ಎ.14ರಂದು ಬೆಳಗ್ಗೆ 10ಕ್ಕೆ ತೊಕ್ಕೊಟ್ಟು ತಾಜುಲ್ ಉಲಮಾ ಮಸ್ಜಿದ್ ನಲ್ಲಿ ಡಿವಿಶನ್ ಅಧ್ಯಕ್ಷ ಸಯ್ಯಿದ್ ಖುಬೈಬ್ ತಂಙಳ್ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಎಸ್ಸೆಸ್ಸೆಫ್ ದ ಕ ಜಿಲ್ಲಾ ಅಧ್ಯಕ್ಷ ಸೆರ್ಕಲ ಇಬ್ರಾಹಿಮ್ ಸಖಾಫಿ ಉದ್ಘಾಟನೆ ಮಾಡಲಿದ್ದಾರೆ. ಎಸ್ಸೆಸ್ಸೆಫ್ ದಕ ಜಿಲ್ಲಾ ದಱ್'ವಾ ಕನ್ವಿನರ್ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ ಎಂದು ಎಸ್ಸೆಸ್ಸೆಫ್ ಉಳ್ಳಾಲ ಡಿವಿಶನ್ ದಱ್'ವಾ ಕನ್ವಿನರ್ ಝುಬೈರ್ ಝುಹ್ರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story