ಉಡುಪಿ: ಪಕ್ಷದ ಟೀಶರ್ಟ್ ವಿತರಿಸುತ್ತಿದ್ದ ಬಿಜೆಪಿಗೆ ಸೇರಿದ ಕಾರು ವಶ
ಉಡುಪಿ, ಎ.13: ಅನುಮತಿ ಇಲ್ಲದೇ ಬಿಜೆಪಿ ಪಕ್ಷದ ಟೀಶರ್ಟ್ಗಳನ್ನು ವಿತರಿಸುತ್ತಿದ್ದ ಮರ್ಸಿಡೀಸ್ ಬೆಂಝ್ ಕಾರೊಂದನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.
ಶುಕ್ರವಾರ ಉಡುಪಿಯಲ್ಲಿ ನಡೆದ ಬಿಜೆಪಿ ಪಕ್ಷದ ಸೈಕಲ್ ಜಾಥಾ ಪ್ರಾರಂಭಗೊಳ್ಳುವ ಸಂದರ್ಭದಲ್ಲಿ ಬನ್ನಂಜೆ ಸಮೀಪ ಅನುಮತಿ ಇಲ್ಲದೇ ಕಾರಿನಲ್ಲಿ ಟೀಶರ್ಟ್ ಹಾಗೂ ಕ್ಯಾಪ್ಗಳನ್ನು ತಂದು ವಿತರಿಸಲಾಗುತ್ತಿತ್ತು. ಈ ಸಂದರ್ಭ ದಲ್ಲಿ ಚುನಾವಣಾ ತಪಾಸಣಾ ತಂಡದ ಅಧಿಕಾರಿಗಳು ದಾಳಿ ನಡೆಸಿ ಸೊತ್ತು ಗಳನ್ನು ಮತ್ತು ಕಾರನ್ನು ವಶಪಡಿಸಿಕೊಂಡಿದ್ದಾರೆ.
ಉಡುಪಿ ವಿಧಾನಸಭಾ ಕ್ಷೇತ್ರದ ಪ್ಲೈಯಿಂಗ್ ಸ್ಕ್ವಾಡ್ ತಂಡದ ಅಧಿಕಾರಿ ನಾಗರಾಜ್ ಅವರು ಈ ಸಂಬಂಧ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
Next Story