ಪರ್ತಿಪ್ಪಾಡಿ: ಖುವ್ವತುಲ್ ಇಸ್ಲಾಂ ದಫ್ ಕಮಿಟಿಯ 45ನೇ ವಾರ್ಷಿಕ, ಸನ್ಮಾನ ಕಾರ್ಯಕ್ರಮ
ವಿಟ್ಲ, ಎ.14: ಪರ್ತಿಪ್ಪಾಡಿ ಖುವ್ವತುಲ್ ಇಸ್ಲಾಂ ದಫ್ ಕಮಿಟಿಯ 45ನೇ ವಾರ್ಷಿಕದ ಅಂಗವಾಗಿ ಧಾರ್ಮಿಕ ಕಾರ್ಯಕ್ರಮವು ವಿಟ್ಲ ಪರ್ತಿಪ್ಪಾಡಿ ಜುಮಾ ಮಸೀದಿಯ ವೇದಿಕೆಯಲ್ಲಿ ಇತ್ತೀಚೆಗೆ ನಡೆಯಿತು.
ಪೆರುವಾಯಿ ಮುದರ್ರಿಸ್ ಅಬ್ದುರ್ರವೂಫ್ ದಾರಿಮಿ ಕಾರ್ಯಕ್ರಮ ಉದ್ಘಾಟಿಸಿದರು. ಸ್ಥಳೀಯ ಖತೀಬ್ ಅಬ್ದುರ್ರಹ್ಮಾನ್ ಫೈಝಿ ಅಧ್ಯಕ್ಷತೆ ವಹಿಸಿದ್ದರು. ವಿಟ್ಲ ಕೇಂದ್ರ ಜುಮಾ ಮಸೀದಿಯ ಖತೀಬ್ ಅಬ್ದುಸ್ಸಲಾಂ ಲತೀಫಿ ಮಾತನಾಡಿದರು.
ಇದೇ ಸಂದರ್ಭ ಮಸೀದಿಯಲ್ಲಿ ಸುಮಾರು 50 ವರ್ಷಗಳಿಂದ ಜುಮಾ ಮಹ್ಸರ ಹೇಳಿದ, ದಫ್ ಕಮಿಟಿಯ ಏಳಿಗೆಗಾಗಿ ಶ್ರಮಿಸಿದ ಆದಂ ಕುಂಞಿಯವರಿಗೆ ಜಮಾಅತ್ ವತಿಯಿಂದ ಅಧ್ಯಕ್ಷ ಕೆ.ಪಿ.ಇಸ್ಮಾಯೀಲ್, ಇಬ್ರಾಹೀಂ ಹಾಜಿ ಮದಕ ಹಾಗೂ ಉಸ್ತಾದರು ಶಾಲು ಹೊದಿಸಿ ಸನ್ಮಾನ ಮಾಡಿದರು.
ವೇದಿಕೆಯಲ್ಲಿ ಎ.ಕೆ.ಉಸ್ತಾದ್, ಜುಮಾ ಮಸೀದಿಯ ಕಾರ್ಯದರ್ಶಿ ಕೆ.ಎಸ್.ಸುಲೈಮಾನ್, ಜೊತೆ ಕಾರ್ಯದರ್ಶಿ ಸಯ್ಯದ್ ಅಲಿ, ಪಿ.ಎಂ.ಹಕೀಂ ಪರ್ತಿಪ್ಪಾಡಿ, ಕರೈ ಸದರ್ ಮುಅಲ್ಲಿಂ ಹಕೀಂ ಮುಸ್ಲಿಯಾರ್, ಸಿ.ಎಚ್.ಇಬ್ರಾಹೀಂ ಮುಸ್ಲಿಯಾರ್, ರಫೀಕ್ ಪರ್ತಿಪ್ಪಾಡಿ, ಕಲಂದರ್ ಪರ್ತಿಪ್ಪಾಡಿ ಹಾಗೂ ಇತರರು ಉಪಸ್ಥಿತರಿದ್ದರು.
ಉಮರ್ ದಾರಿಮಿ ಪರ್ತಿಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು.