ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಅಧ್ಯಕ್ಷರಾಗಿ ಆಲ್ವಿನ್ ಕ್ವಾಡ್ರಸ್
ಉಡುಪಿ, ಎ.14: ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ 2019-20 ನೆ ಸಾಲಿನ ಅಧ್ಯಕ್ಷರಾಗಿ ಯುವ ಉದ್ಯಮಿ ಆಲ್ವಿನ್ ಕ್ವಾಡ್ರಸ್ ಕೋಟ ಮರು ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ಸಂಘಟನೆಯ ಕೇಂದ್ರ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ನೂತನ ಪದಾಧಿಕಾರಿಗಳ ಈ ಆಯ್ಕೆ ನಡೆಯಿತು. ಚುನಾವಣೆಯನ್ನು ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ನ ಮಾಜಿ ಅಧ್ಯಕ್ಷ ಎಲ್ರೋಯ್ ಕಿರಣ್ ಕ್ರಾಸ್ಟೊ, ಆಧ್ಯಾತ್ಮಿಕ ನಿರ್ದೇಶಕ ವಂ.ಫರ್ಡಿನಾಂಡ್ ಗೊನ್ಸಾಲ್ವಿಸ್ ಉಪಸ್ಥಿತಿ ಯಲ್ಲಿ ನಡೆಸಿಕೊಟ್ಟರು.
ನಿಕಟಪೂರ್ವ ಅಧ್ಯಕ್ಷರಾಗಿ ವಲೇರಿಯನ್ ಫೆರ್ನಾಂಡಿಸ್ ಸಂತೆಕಟ್ಟೆ, ನಿಯೋಜಿತ ಅಧ್ಯಕ್ಷರು ರೋಬರ್ಟ್ ಮಿನೇಜಸ್ ಕಣಜಾರು, ಉಪಾಧ್ಯಕ್ಷರಾಗಿ ಫ್ಲ್ಯಾವನ್ ಡಿಸೋಜ ಬಸ್ರೂರು, ಪ್ರಧಾನ ಕಾರ್ಯದರ್ಶಿಯಾಗಿ ಸಂತೋಷ್ ಕರ್ನೆಲಿಯೋ ಸಂತೆಕಟ್ಟೆ, ಸಹ ಕಾರ್ಯದರ್ಶಿಯಾಗಿ ಗ್ರೆಗೋರಿ ಪಿಕೆ ಡಿಸೋಜ ಶಂಕರಪುರ, ಕೋಶಾಧಿಕಾರಿಯಾಗಿ ಜೆರಾಲ್ಡ್ ರೊಡ್ರಿಗಸ್ ಶಿರ್ವ, ಸಹ ಕೋಶಾಧಿಕಾರಿಯಾಗಿ ಅನಿಲ್ ಡಿಸೋಜ ಮೂಡುಬೆಳ್ಳೆ, ಆಂತರಿಕ ಲೆಕ್ಕಪರಿ ಶೋಧಕರಾಗಿ ಫೆಲಿಕ್ಸ್ ಪಿಂಟೊ ಕೆಮ್ಮಣ್ಣು ಆಯ್ಕೆಯಾಗಿದ್ದಾರೆ.
Next Story