ಮೆಲ್ಕಾರ್ ಮಹಿಳಾ ಕಾಲೇಜಿಗೆ ಉತ್ತಮ ಫಲಿತಾಂಶ
ಮಂಗಳೂರು, ಎ.15: ಬಂಟ್ವಾಳ ತಾಲೂಕಿನ ಮಾರ್ನಬೈಲ್ ಬಳಿಯ ಮೆಲ್ಕಾರ್ ಮಹಿಳಾ ಪ.ಪೂ. ಕಾಲೇಜಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಹಾಜರಾದ 133 ವಿದ್ಯಾರ್ಥಿನಿಯರ ಪೈಕಿ 13 ಮಂದಿ ಉನ್ನತ ಶ್ರೇಣಿ ಹಾಗೂ 86 ಮಂದಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗುವ ಮೂಲಕ ಶೇ. 89 ಫಲಿತಾಂಶವನ್ನು ದಾಖಲಿಸಿದ್ದಾರೆ.
ವಾಣಿಜ್ಯ ವಿಭಾಗದ ಅಮೀನತ್ ಆರೀಫಾ 561, ವಿಜ್ಞಾನ ವಿಭಾಗದ ಮೈಮುನತ್ ಲುತ್ಫಾ 545, ಕಲಾ ವಿಭಾಗದ ನಝೀಬಾ 535 ಅಂಕಗಳನ್ನು ಪಡೆದು ವಿಭಾಗವಾರು ಪ್ರಥಮ ಸ್ಥಾನಿಗಳಾಗಿರುತ್ತಾರೆ ಎಂದು ಕಾಲೇಜಿನ ಪ್ರಕಟನೆ ತಿಳಿಸಿದೆ.
Next Story