ಮಂಗಳೂರು: ಸೈಂಟ್ ಆಗ್ನೇಸ್ ಪಿಯು ಕಾಲೇಜಿಗೆ ಉತ್ತಮ ಫಲಿತಾಂಶ
ಆ್ಯಶ್ಲೀನ್, ರೀಶ್ಮಾ, ಬಿಂದು
ಮಂಗಳೂರು, ಎ.16: ನಗರದ ಸಂತ ಆಗ್ನೇಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಆ್ಯಶ್ಲೀನ್ ಜೋಯನ್ ರೇಶಲ್ ಪಿಂಟೊ ವಿಜ್ಞಾನ ವಿಭಾಗದಲ್ಲಿ 579 ಅಂಕದೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿ (ಶೇ. 96.5) ಅಂಕಗಳಿಸಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ರೀಷ್ಮಾ ಲೀಟಾ ಪಿರೇರಾ 582 (ಶೇ.97) ಮತ್ತು ಕಲಾ ವಿಭಾಗದಲ್ಲಿ ಬಿಂದು 559 (ಶೇ.93) ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story