ಮಂಗಳೂರು: ಅಪಘಾತದಲ್ಲಿ ಕಾಲು ಕಳೆದುಕೊಂಡರೂ ಧೃತಿಗೆಡದ ಫಾತಿಮಾ ಸುಝ್ನ
ಪಿಯುಸಿ ವಾಣಿಜ್ಯ ವಿಭಾಗದಲ್ಲಿ ತೇರ್ಗಡೆ
ಮಂಗಳೂರು, ಎ.16: ನಗರದ ಸಂತ ಆಗ್ನೇಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಫಾತಿಮಾ ಸುಝ್ನಾ ಅಪಘಾತದಲ್ಲಿ ಕಾಲು ಕಳೆದುಕೊಂಡರೂ ಕೂಡ ಧೃತಿಗೆಡದೆ ದ್ವಿತೀಯ ಪಿಯುಸಿಯ ವಾಣಿಜ್ಯ ವಿಭಾಗದಲ್ಲಿ ತೇರ್ಗಡೆ ಹೊಂದುವ ಮೂಲಕ ಗಮನ ಸೆಳೆದಿದ್ದಾರೆ.
ಫಾತಿಮಾ ಸುಝ್ನ ದ್ವಿತೀಯ ಪಿಯುಸಿ ಓದುತ್ತಿರುವಾಗಲೇ ಕಾಲೇಜಿಗೆ ನಡೆದುಕೊಂಡು ಬರುತ್ತಿರುವಾಗ ಆಕಸ್ಮಿಕವಾಗಿ ರೈಲ್ವೆ ಹಳಿಯ ಮಧ್ಯೆ ಸಿಲುಕಿಕೊಂಡು ತನ್ನ ಒಂದು ಕಾಲಿನ ಅರ್ಧಭಾಗವನ್ನೇ ಕಳೆದುಕೊಂಡಿದ್ದರು. ಕಾಲೇಜಿನ ಪಾಠ ಪ್ರವಚನಗಳನ್ನು ಅರ್ಧಕ್ಕೆ ನಿಲ್ಲಿಸಿ ಆಸ್ಪತ್ರೆಯಲ್ಲೇ ತನ್ನ ಬದುಕಿನ ಅದೆಷ್ಟೋ ದಿನಗಳನ್ನು ಕಳೆದರೂ ಕೂಡ ಧೃತಿಗೆಡದೆ ಛಲದಿಂದ ಓದಿ ಪರೀಕ್ಷೆಗೆ ಹಾಜರಾಗಿದ್ದರು.
ತನ್ನೆಲ್ಲಾ ಕಷ್ಟವನ್ನು ನುಂಗಿ, ನೋವು ಸಹಿಸಿ ಪ್ರಯತ್ನಕ್ಕೆ ಫಲವನ್ನು ಪಡೆದ ಫಾತಿಮಾ ಸುಝ್ನೆ 331 ಅಂಕಗಳನ್ನು ಪಡೆದು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
Next Story