ಎ.20: ಶಬೇ ಬರಾಅತ್ ರಾತ್ರಿ
ಮಂಗಳೂರು, ಎ.16: ಶನಿವಾರ ಅಸ್ತಮಿಸಿದ ರವಿವಾರ ರಾತ್ರಿ (ಎ.20) ಶಬೇ ಬರಾಅತ್ ಆಗಿರುತ್ತದೆ. ಅಂದು ಮಂಗಳೂರು ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿಯಲ್ಲಿ ಮಗ್ರಿಬ್ ನಮಾಝ್ನ ಬಳಿಕ ದ.ಕ.ಜಿಲ್ಲಾ ಖಾಝಿ ಅಲ್ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ರ ನೇತೃತ್ವದಲ್ಲಿ ಖುರಾನ್ ಪಾರಾಯಣ ಹಾಗೂ ಕೂಟು ದುಆ ನಡೆಯಲಿದೆ ಎಂದು ಕೇಂದ್ರ ಜುಮಾ ಮಸೀದಿ ಮತ್ತು ಈದ್ಗಾ ಜುಮಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story