ಕೊಣಾಜೆ ಅಡ್ಕರೆಪಡ್ಪು ಗ್ರೀನ್ ವೀವ್ಗೆ ಶೇ.100 ಫಲಿತಾಂಶ
ಮಂಗಳೂರು, ಎ.16: ಜಮೀಯ್ಯತುಲ್ ಫಲಾಹ್ ದ.ಕ. ಹಾಗೂ ಉಡುಪಿ ಜಿಲ್ಲೆಯ ಅಧೀನ ಸಂಸ್ಥೆಯಾದ ಕೊಣಾಜೆ ಸಮೀಪದ ಅಡ್ಕರೆಪಡ್ಪುವಿನ ಗ್ರೀನ್ ವೀವ್ ಮಹಿಳಾ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದಿಂದ ಹಾಜರಾದ 17 ವಿದ್ಯಾರ್ಥಿಗಳ ಪೈಕಿ 5 ವಿದ್ಯಾರ್ಥಿನಿಯರು ಡಿಸ್ಟಿಂಕ್ಷನ್ ಹಾಗೂ 12 ವಿದ್ಯಾರ್ಥಿನಿಯರು ಪ್ರಥಮ ಶ್ರೇಣಿಯೊಂದಿಗೆ ಉತ್ತೀರ್ಣರಾಗುವ ಮೂಲಕ ಶೇ.100 ಫಲಿತಾಂಶ ದಾಖಲಿಸಿದ್ದಾರೆ.
ರೈಹಾನ 556 (ಶೇ.92.66) ಮತ್ತು ರಾಫೀದಾ 546 (ಶೇ.91) ಮೌಸಿತಾ 542 (ಶೇ.90.33) ಅಧಿಕ ಅಂಕ ಗಳಿಸಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story