ಅಮೆರಿಕದಲ್ಲಿ ಸಹ್ಯಾದ್ರಿ ಚಾಲೆಂಜರ್ಸ್ ತಂಡ
ಮಂಗಳೂರು, ಎ.17: ಸಹ್ಯಾದ್ರಿ ಚಾಲೆಂಜರ್ಸ್ ತಂಡವು ಅಮೆರಿಕದ ಕ್ಯಾಲಿಫೋರ್ನಿಯಾ ವುಡ್ಲೆ ಅವೆನ್ಯೂನಲ್ಲಿ ನಡೆದ ‘ಎಸ್ಎಇ ಇಂಟರ್ನ್ಯಾಷನಲ್ ಎರೋಮೊಡೆಲಿಂಗ್ ವೆಸ್ಟ್ 2019’ ಮೂರು-ದಿನದ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಂಡು 5ನೇ ಸ್ಥಾನ ಪಡೆದಿದೆ.
ಸ್ಪರ್ಧೆಯಲ್ಲಿ 3ನೇ ವರ್ಷದ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗದಿಂದ ಮೇಘನಾ ಎನ್. ಶೆಟ್ಟಿ ಹಾಗೂ ಪ್ರಥಮ ವರ್ಷದ ಇಂಜಿನಿಯರಿಂಗ್ ವಿಭಾಗದಿಂದ ರೋಷನ್, ಶ್ರೀನಿಧಿ ಮತ್ತು ಹರ್ಶನ್ ಪಾಲ್ಗೊಂಡಿದ್ದರು. ಸ್ಪರ್ಧೆಯಲ್ಲಿ ವಿಶ್ವದಾದ್ಯಂತ ಒಟ್ಟು 75 ತಂಡಗಳು ಭಾಗವಹಿಸಿದ್ದವು.
Next Story