ಬೆಳ್ತಂಗಡಿ: ಕಾಲಿನಲ್ಲೇ ಮತ ಚಲಾಯಿಸಿದ ಸಬಿತಾ ಮೋನಿಸ್
ಬೆಳ್ತಂಗಡಿ, ಎ.18: ಇಲ್ಲಿನ ಪಡಂಗಡಿ ಸಮೀಪದ ಗರ್ಡಾಡಿ ಮತಗಟ್ಟೆಯಲ್ಲಿ ವಿಕಲಚೇತನ ಮಹಿಳೆಯೊಬ್ಬರು ಕಾಲಿನಿಂದ ಮತದಾನ ಮಾಡುವ ಮೂಲಕ ಹಕ್ಕು ಚಲಾವಣೆಯಲ್ಲಿ ಉಳಿದವರಿಗೆ ಮಾದರಿಯಾದರು.
ಎರಡು ಕೈಗಳಿಲ್ಲದ ಸಬಿತಾ ಮೋನಿಸ್ ಕಾಲಿನಲ್ಲೇ ಮತ ಚಲಾಯಿಸಿದರು. ಗರ್ಡಾಡಿ ಮತಗಟ್ಟೆಗೆ ಆಗಮಿಸಿದ ಸಬಿತಾ ಉತ್ಸಾಹದಿಂದ ಮತದಾನ ಮಾಡಿದರು. ಚುನಾವಣಾ ಸಿಬ್ಬಂದಿ ಅವರ ಕಾಲಿನ ಬೆರಳಿಗೆ ಶಾಯಿ ಗುರುತು ಹಾಕಿದರು. ಬಳಿಕ ಮತಗಟ್ಟೆಯ ಹೊರಗೆ ಆಗಮಿಸಿದ ಸಬಿತಾ ಅವರು ಶಾಯಿ ಗುರುತನ್ನು ತೋರಿಸಿ ಹಕ್ಕು ಚಲಾವಣೆಯ ಖುಷಿಯನ್ನು ಹಂಚಿಕೊಂಡರು.