ಗಂಗೊಳ್ಳಿ: ತೌಹೀದ್ ಮಹಿಳಾ ಪಿಯು ಕಾಲೇಜಿಗೆ ಉತ್ತಮ ಫಲಿತಾಂಶ
ಗಂಗೊಳ್ಳಿ: ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಗಂಗೊಳ್ಳಿಯ ತೌಹೀದ್ ಮಹಿಳಾ ಪದವಿ ಪೂರ್ವ ಕಾಲೇಜು ಉತ್ತಮ ಫಲಿತಾಂಶ ಪಡೆದುಕೊಂಡಿದೆ.
ಪರೀಕ್ಷೆಗೆ ಹಾಜರಾದ ಒಟ್ಟು 38 ವಿದ್ಯಾರ್ಥಿನಿಯರಲ್ಲಿ 9 ಮಂದಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದು, 21 ಮಂದಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿ ಶೇ. 94.73 ಫಲಿತಾಂಶ ಪಡೆದುಕೊಂಡಿದೆ.
ವಿದ್ಯಾರ್ಥಿನಿಯರಾದ ಶಹೀನ 570 ಅಂಕ, ಸಂಹ ಅತುಫ್ ಮುಹಮ್ಮದ್ 569, ಸಕೀನ ಗುಝಿಯ ಮುಹಮ್ಮದ್ 547, ಹಾಜಿರಾ ಹನೀನ್ ಎಂ.ಎಚ್. 540, ಅಫ್ಸಿರ ಶಬ್ಬಿರ್ ಅಹ್ಮದ್ 540, ಆಯಿಶಾ ಝುಂಹೆರಾ 539, ಕಾಝಿ ಖೌಲಾ 537, ಫಾತಿಮಾ ಸಮ್ರಾ 527, ನಿದಾ ಯನೆ ಕೆ.ಐ. ಫಾತಿಮತ್ ನಿದಾ 519 ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ ಎಂದು ತೌಹೀದ್ ಎಜುಕೇಶನಲ್ ಟ್ರಸ್ಟ್ ಪ್ರಕಟನೆಯಲ್ಲಿ ತಿಳಿಸಿದೆ.
Next Story