ಪಿಯು ಫಲಿತಾಂಶ: ಹಿರಿಯಡ್ಕ ಸರಕಾರಿ ಕಾಲೇಜಿನ ಸಫ ಉತ್ತಮ ಸಾಧನೆ
ಉಡುಪಿ,ಎ.20: ಇತ್ತೀಚೆಗೆ ಪ್ರಕಟಗೊಂಡ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಹಿರಿಯಡ್ಕ ಸರಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿನಿ ಸಫ 539 ಅಂಕ (ಶೇ.89.83) ಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣಳಾಗಿದ್ದಾಳೆ.
ಹಿಂದಿ-88, ಇಂಗ್ಲೀಷ್-92, ಅರ್ಥಶಾಸ್ತ್ರ-83, ವ್ಯವಹಾರ ಅಧ್ಯಯನ-91, ಅಕೌಂಟೆನ್ಸಿ-96, ಸ್ಟಾಟಿಸ್ಟಿಕ್ಸ್ ನಲ್ಲಿ 89 ಅಂಕ ಗಳಿಸಿದ್ದು, ಈಕೆ ಪೆರ್ಡೂರು ನಿವಾಸಿಗಳಾದ ಮೈಮೂನ- ಬಶೀರ್ ದಂಪತಿಯ ಪುತ್ರಿಯಾಗಿದ್ದಾಳೆ.
Next Story