ಬಿಸಿಸಿಐ ವತಿಯಿಂದ ಬಿಸಿನೆಸ್ ನೆಟ್ವರ್ಕ್ ಮೀಟ್
ಮಂಗಳೂರು, ಎ.21: ಬ್ಯಾರೀಸ್ ಚೇಂಬರ್ ಅಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ವತಿಯಿಂದ ಬಿಸಿನೆಸ್ ನೆಟ್ವರ್ಕ್ ಮೀಟ್ ನಗರದ ಓಶಿಯನ್ ಪರ್ಲ್ ಹೊಟೇಲ್ನಲ್ಲಿ ಗುರುವಾರ ನಡೆಯಿತು.
ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿಯ ಅಧ್ಯಕ್ಷ ಹಾಜಿ ಎಸ್.ಎಂ. ರಶೀದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಿಹಾಬ್ ಕಲಂದರ್ ಬಿಸಿನೆಸ್ ನೆಟ್ವರ್ಕ್ನ ಮಹತ್ವದ ಬಗ್ಗೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನೂರರಷ್ಟು ಉದ್ಯಮಿಗಳು ತಮ್ಮ ಉದ್ಯಮವನ್ನು ಪರಿಚಯಿಸಿದರು ಹಾಗೂ ಮಾರುಕಟ್ಟೆಯಲ್ಲಿ ಎದುರಿಸುವ ಸವಾಲುಗಳ ಬಗ್ಗೆ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಬಿಸಿಸಿಐ ವತಿಯಿಂದ ಯಶಸ್ವಿ ಉದ್ಯಮದ ಬಗ್ಗೆ ಮಾರ್ಗದರ್ಶನ ಮತ್ತು ಸಲಹೆ ಸೂಚನೆಗಳನ್ನು ನೀಡಲಾಯಿತು.
ಈ ಸಂದರ್ಭ ಬಿಸಿಸಿಐ ಪ್ರಧಾನ ಕಾರ್ಯದರ್ಶಿ ಇಮ್ತಿಯಾಝ್ ಅಹ್ಮದ್, ಉಪಾಧ್ಯಕ್ಷ ಅಬ್ದುಲ್ ರವೂಫ್ ಪುತ್ತಿಗೆ, ಕಾರ್ಯಕಾರಿ ಸಮಿತಿ ಸದಸ್ಯರಾದ ರಿಯಾಝ್ ಬಾವಾ, ಜಿ ಅಬ್ದುಲ್ ರಝಾಕ್, ಬಿ.ಎ. ನಝೀರ್ ಹಾಗೂ ಸದಸ್ಯರುಗಳಾದ ಬದ್ರುದ್ದೀನ್ ಡೇಲ್ಟಾ, ಎಸ್ಎಂ ಮುಸ್ತಫಾ, ಬಿ.ಎಸ್. ಬಶೀರ್, ಇಮ್ತಿಯಾಝ್ ಕತೀಬ್, ಅನ್ಸಾರ್ ಸುಹಾನ ಟ್ರಾವೆಲ್ಸ್, ನಿಸಾರ್ ಇಂಜಿನಿಯರ್ ನೂರ್ ಬಿಲ್ಡರ್, ಮುತ್ತಲಿಬ್, ಸಂಶುದ್ದೀನ್, ನವಾಝ್, ಬಿಸಿಸಿಐ ಚಿಕ್ಕಮಗಳೂರು ಘಟಕದ ಅಧ್ಯಕ್ಷ ಅಬ್ದುಲ್ ಸತ್ತಾರ್ ಮತ್ತಿತರರು ಉಪಸ್ಥಿತರಿದ್ದರು.
ಬಿಸಿಸಿಐ ಕಾರ್ಯದರ್ಶಿ ನಿಸಾರ್ ಎಫ್. ಮುಹಮ್ಮದ್ ಸ್ವಾಗತಿಸಿದರು. ಕೋಶಾಧಿಕಾರಿ ಮನ್ಸೂರ್ ಅಹ್ಮದ್ ವಂದಿಸಿದರು.