ಮಾಜಿ ಕಾರ್ಪೊರೇಟರ್ ಲ್ಯಾನ್ಸಿ ಸೆರಾವೋ ನಿಧನ
ಮಂಗಳೂರು, ಎ. 21: ಮಂಗಳೂರು ಮಹಾ ನಗರ ಪಾಲಿಕೆಯ ಮಾಜಿ ಕಾರ್ಪೊರೇಟರ್ ಕಂಕನಾಡಿಯ ನಿವಾಸಿಯಾಗಿರುವ ಲ್ಯಾನ್ಸಿ ಸೆರಾವೋ (71) ರವಿವಾರ ನಿಧನರಾಗಿದ್ದಾರೆ.
ವೆಲೆನ್ಸಿಯಾ ವಾರ್ಡನ್ನು ಪ್ರತಿನಿಧಿಸುತ್ತಿದ್ದ ಇವರು ಮನಪಾ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ, ಮ್ಯಾಕೋ ಸೊಸೈಟಿಯ ನಿರ್ದೇಶಕರಾಗಿ, ರಚನಾ ಅಧ್ಯಕ್ಷ ರಾಗಿ, ಮಂಗಳೂರು ಪ್ರೊಡಕ್ಟಿವಿಟಿ ಕೌನ್ಸಿಲ್ನ ಸದಸ್ಯರಾಗಿ, ಸಂತ ಸೆಬೆಸ್ಟಿಯನ್ ಚರ್ಚ್ನ ಪಾಲನಾ ಸಮಿತಿಯ ಕಂಕನಾಡಿ ವಾರ್ಡ್ನ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿದ್ದರು.
ಮೃತರು ಪತ್ನಿ ಮತ್ತು ಇಬ್ಬರು ಪುತ್ರರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
Next Story