ಶ್ರೀಲಂಕಾದಲ್ಲಿ ಉಗ್ರದಾಳಿ: ಸಂತಾಪ ಟ್ವೀಟ್ ನಲ್ಲಿ ಟ್ರಂಪ್ ಎಡವಟ್ಟು
ವಾಶಿಂಗ್ಟನ್,ಎ.21: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಅವರು ಶ್ರೀಲಂಕಾದಲ್ಲಿ ರವಿವಾರ ನಡೆದ ಸರಣಿ ಸ್ಫೋಟವನ್ನು ಖಂಡಿಸಿ ಟ್ವೀಟ್ ಮಾಡಿದ್ದಾರೆ. ಆದರೆ ಅವರು ಸ್ಫೋಟದಲ್ಲಿ ಲಕ್ಷಾಂತರ ಮಂದಿ ಸಾವನ್ನಪ್ಪಿದ್ದಾರೆಂದು ಉಲ್ಲೇಖಿಸಿ ಎಡವಟ್ಟು ಮಾಡಿಕೊಂಡಿದ್ದಾರೆ.
ಟ್ರಂಪ್ ಅವರು ಇಂದು ಟ್ವಿಟರ್ ನಲ್ಲಿ ಪ್ರಕಟಿಸಿರುವ ಸಂತಾಪ ಸಂದೇಶದಲ್ಲಿ, ಕೊಲಂಬೊದಲ್ಲಿ ನಡೆದ ಸ್ಫೋಟದಲ್ಲಿ ಕನಿಷ್ಠ 138 ಮಿಲಿಯಮಂದಿ ಸಾವನ್ನಪ್ಪಿದ್ದಾರೆಂದು ಉಲ್ಲೇಖಿಸಿದ್ದರು.
ಕೊಲಂಬೊದಲ್ಲಿ ರವಿವಾರ ನಡೆದ ಒಟ್ಟು ಎಂಟು ಸ್ಫೋಟಗಳಲ್ಲಿ 35 ಮಂದಿ ವಿದೇಶಿಯರು ಸೇರಿದಂತೆ 207 ಮಂದಿ ಸಾವನ್ನಪ್ಪಿದ್ದು, 400ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆಂದು ಶ್ರೀಲಂಕಾ ಸರಕಾರದ ಅಧಿಕೃತ ಮೂಲಗಳು ತಿಳಿಸಿವೆ.
ಟ್ವಿಟರ್‌ನಲ್ಲಿ ತಪ್ಪಾಗಿ ಸಾವಿನೋವಿನ ಸಂಖ್ಯೆಯನ್ನು ಉಲ್ಲೇಖಿಸಿರುವುದು ಗಮನಕ್ಕೆ ಬಂದ ಬಳಿಕ ಆ ಟ್ವಿಟರ್ ಸಂದೇಶವನ್ನು ಅಳಿಸಿ ಹಾಕಲಾಗಿತ್ತು. ಆನಂತರ ಆ ಜಾಗದಲ್ಲಿ ಹೊಸದಾಗಿ ಸಂದೇಶವನ್ನು ಪ್ರಕಟಿಸಲಾಯಿತು.
Next Story