ಮನೆಗೆ ನುಗ್ಗಿ ಚಿನ್ನಾಭರಣ ಕಳವು
ಬ್ರಹ್ಮಾವರ, ಎ.23: ಹಂದಾಡಿ ಗ್ರಾಮದ ಬೇಳೂರುಜೆಡ್ಡು ರಸ್ತೆಯ ಮನೆಯೊಂದಕ್ಕೆ ಎ. 20ರ ಬೆಳಗ್ಗೆ 10 ಗಂಟೆಯಿಂದ 22ರ ಬೆಳಗ್ಗೆ 10:30ರ ಮಧ್ಯಾ ವಧಿಯಲ್ಲಿ ನುಗ್ಗಿದ ಕಳ್ಳರು ಸಾವಿರಾರು ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಸವಿತಾ ಎಂಬವರು ಮನೆಗೆ ಬೀಗ ಹಾಕಿ ತನ್ನ ತಾಯಿ ಮನೆಯಾದ ಉಪ್ಪುಂದಕ್ಕೆ ಹೋಗಿದ್ದು, ಈ ವೇಳೆ ಮನೆಯ ಮುಂದಿನ ಬಾಗಿಲಿನ ಲಾಕ್ ಮುರಿದು ಒಳನುಗ್ಗಿದ ಕಳ್ಳರು, ಮಲಗುವ ಕೋಣೆಯ ಎರಡು ಕಬ್ಬಿಣದ ಕಪಾಟನ್ನು ಒಡೆದು ಪರ್ಸಿನಲ್ಲಿ ಇರಿಸಿದ್ದ ಒಟ್ಟು 20 ಸಾವಿರ ರೂ. ಮೌಲ್ಯದ 2 ಚಿನ್ನದ ಉಂಗುರ ಹಾಗೂ 1 ಜೊತೆ ಚಿನ್ನದ ಕಿವಿಯ ಮಾಟಿ ಚೈನ್ ಮತ್ತು 3000ರೂ. ನಗದು ಕಳವು ಮಾಡಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story