ಎ.25: ಸರಣಿ ಸ್ಫೋಟ ಖಂಡಿಸಿ ಮುಸ್ಲಿಮ್ ಸಂಘಟನೆಗಳ ಒಕ್ಕೂಟದಿಂದ ಮೌನ ಪ್ರತಿರೋಧ
ಮಂಗಳೂರು, ಎ.23: ಶ್ರೀಲಂಕಾದ ಕೊಲೊಂಬೋದಲ್ಲಿ ರವಿವಾರ ನಡೆದ ಸರಣಿ ಬಾಂಬ್ ಸ್ಪೋಟವು ಹಿಂಸೆಯ ಪರಮಾವಧಿಯಾಗಿದೆ. ಪ್ರಾರ್ಥನಾ ಮಂದಿರ, ವಿಲಾಸಿ ತಾಣಗಳು ಮತ್ತು ಸಾರ್ವಜನಿಕ ಸ್ಥಳಗಳನ್ನು ಗುರಿಮಾಡಿ ನಡೆಸಿದ ಈ ಕೃತ್ಯವು ನಾಗರಿಕತೆಯ ಹತ್ಯೆಯಾಗಿದೆ. ಇದನ್ನು ದ.ಕ.ಜಿಲ್ಲಾ ಮುಸ್ಲಿಮ್ ಸಂಘಟನೆಗಳ ಒಕ್ಕೂಟ ತೀವ್ರವಾಗಿ ಖಂಡಿಸಿದೆ. ಅಲ್ಲದೆ ಎ.25ರಂದು ಸಂಜೆ 4:30ಕ್ಕೆ ಜಿಲ್ಲಾಧಿಕಾರಿ ಕಚೇರಿ ಬಳಿ ಕೃತ್ಯ ವಿರೋಧಿಸಿ ಮೌನ ಪ್ರತಿರೋಧ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
Next Story