ಪರ್ತಿಪ್ಪಾಡಿ ಅಲ್-ಬಿರ್ರ್ ಇಸ್ಲಾಮಿಕ್ ಫ್ರೀ ಸ್ಕೂಲ್ ಕಚೇರಿಯ ಉದ್ಘಾಟನೆ
ಬಂಟ್ವಾಳ, ಎ. 24: ಪರ್ತಿಪ್ಪಾಡಿ ಅಲ್-ಬಿರ್ರ್ ಇಸ್ಲಾಮಿಕ್ ಫ್ರೀ ಸ್ಕೂಲ್ ಇದರ ಕಚೇರಿಯ ಉದ್ಘಾಟನಾ ಸಮಾರಂಭ ಇತ್ತೀಚೆಗೆ ನಡೆಯಿತು.
ಎನ್. ಅಬ್ದುಲ್ ಕುಂಞಿ ಮೆಮೋರಿಯಲ್ ಎಜುಕೇಷನ್ ಟ್ರಸ್ಟ್ ನ ಅಧ್ಯಕ್ಷ ಅಬ್ದುಲ್ ರಹಿಮಾನ್ ಮುಸ್ಲಿಯಾರ್ ಅವರು ಕಚೇರಿಯನ್ನು ಉದ್ಘಾಟಿಸಿದರು.
ಅಲ್ಖೈರ್ ಮಹಿಳಾ ಶರೀಯತ್ ಕಾಲೇಜಿನ ಹಾಗೂ ಜುಮಾ ಮಸೀದಿ ವಿಟ್ಲ ಇದರ ಆಡಳಿತ ಸಮಿತಿ ಅಧ್ಯಕ್ಷ ಇಬ್ರಾಹಿಂ, ಜುಮಾ ಮಸೀದಿ ಪರ್ತಿಪ್ಪಾಡಿ ಅಧ್ಯಕ್ಷ ಇಸ್ಮಾಯೀಲ್, ಹಕೀಂ ಪರ್ತಿಪ್ಪಾಡಿ, ಹಕೀಂ ಅರ್ಶದಿ, ಇಬ್ರಾಹೀಂ ಪಾಣೆಮಂಗಳೂರು, ಮುಸ್ತಫಾ ಖಲೀಲ್ ವಿಟ್ಲ, ವ್ಯವಸ್ಥಾಪಕ ಹಾರೀಸ್ ಕೊಡಂಗಾಯಿ, ಖಲಂದರ್ ಪರ್ತಿಪ್ಪಾಡಿ, ನೌಶಿನ್ ಬದ್ರಿಯಾ, ಮುಹಮ್ಮದ್ ರಫೀಕ್ ಪರ್ತಿಪ್ಪಾಡಿ ಮೊದಲಾದವರು ಭಾಗವಹಿಸಿದ್ದರು.
Next Story