ಶ್ರೀಲಂಕಾ: ಎಲ್ಲ ಚರ್ಚ್‌ಗಳನ್ನು ಮುಚ್ಚಲು ಧಾರ್ಮಿಕರ ನಾಯಕ ಆದೇಶ
ಕೊಲಂಬೊ, ಎ. 25: ಈಸ್ಟರ್ ರವಿವಾರದಂದು ನಡೆದ ಸರಣಿ ಬಾಂಬ್ ಸ್ಫೋಟಗಳ ಹಿನ್ನೆಲೆಯಲ್ಲಿ, ಭದ್ರತಾ ಪರಿಸ್ಥಿತಿ ಸುಧಾರಿಸುವವರೆಗೆ ಶ್ರೀಲಂಕಾದ ಎಲ್ಲ ಕೆಥೋಲಿಕ್ ಚರ್ಚ್‌ಗಳನ್ನು ಮುಚ್ಚಲು ಹಾಗೂ ಎಲ್ಲ ಪ್ರಾರ್ಥನಾ ಸೇವೆಗಳನ್ನು ಸ್ಥಗಿತಗೊಳಿಸಲು ಆದೇಶ ನೀಡಲಾಗಿದೆ ಎಂದು ಹಿರಿಯ ಧಾರ್ಮಿಕ ನಾಯಕರೊಬ್ಬರು ಗುರುವಾರ ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
‘‘ಭದ್ರತಾ ಪಡೆಗಳ ಸಲಹೆಯ ಮೇರೆಗೆ, ನಾವು ಎಲ್ಲ ಚರ್ಚ್‌ಗಳನ್ನು ಮುಚ್ಚುತ್ತಿದ್ದೇವೆ’’ ಎಂದು ಅವರು ಹೇಳಿದರು. ‘‘ಮುಂದಿನ ಸೂಚನೆಯವರೆಗೆ ಚರ್ಚ್‌ಗಳಲ್ಲಿ ಸಾರ್ವಜನಿಕ ಪ್ರಾರ್ಥನೆಗಳಿರುವುದಿಲ್ಲ’’ ಎಂದರು.
ದೇಶಾದ್ಯಂತವಿರುವ ಚರ್ಚ್‌ಗಳಲ್ಲಿ ಭದ್ರತೆಯನ್ನು ಈಗಾಗಲೇ ಹೆಚ್ಚಿಸಲಾಗಿದೆ ಎಂದು ಸರಕಾರಿ ಅಧಿಕಾರಿಗಳು ಹೇಳಿದರು.
ಶ್ರೀಲಂಕಾದ ಮೂರು ಚರ್ಚ್‌ಗಳು ಮತ್ತು ನಾಲ್ಕು ವಿಲಾಸಿ ಹೊಟೇಲ್‌ಗಳನ್ನು ಗುರಿಯಾಗಿಸಿ ರವಿವಾರ ನಡೆದ ಸರಣಿ ಆತ್ಮಹತ್ಯಾ ಬಾಂಬ್ ದಾಳಿಗಳಲ್ಲಿ ಕನಿಷ್ಠ 359 ಮಂದಿ ಮೃತಪಟ್ಟಿದ್ದಾರೆ ಹಾಗೂ ಹಲವು ನೂರು ಮಂದಿ ಗಾಯಗೊಂಡಿದ್ದಾರೆ.
Next Story