ಎ. 27: ಕ್ಯಾಂಪಸ್ ಕೊಲೊಕಿಯಮ್, ಒರ್ಬಿಟ್ ಕೆರಿಯರ್ ಗೈಡೆನ್ಸ್ ಕಾರ್ಯಗಾರ
ಉಳ್ಳಾಲ: ಎಸ್ಸೆಸ್ಸೆಫ್ ಉಳ್ಳಾಲ ಡಿವಿಶನ್ ಕ್ಯಾಂಪಸ್ ಹಾಗೂ ವಿಸ್ಡಂ ವತಿಯಿಂದ ಕ್ಯಾಂಪಸ್ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಕೊಲೊಕಿಯಮ್ ಹಾಗೂ ಓರ್ಬಿಟ್ ಕೆರಿಯರ್ ಗೈಡೆನ್ಸ್ ಕಾರ್ಯಗಾರವು ಎ. 27ರಂದು ಮಧ್ಯಾಹ್ನ 2ರಿಂದ ಸಂಜೆ 5ರವರೆಗೆ ಮರ್ಕಝುಲ್ ಹಿದಾಯ ಕ್ಯಾಂಪಸ್ ಕೊಟೇಕಾರ್ ನಲ್ಲಿ ನಡೆಯಲಿದೆ.
ಎಸ್ಸೆಸ್ಸೆಫ್ ದ ಕ ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ಮೊಹಮ್ಮದ್ ಅಲಿ ತುರ್ಕಳಿಕೆ ಉದ್ಘಾಟಿಸುವರು. ಎಸ್ಸೆಸ್ಸೆಫ್ ಉಳ್ಳಾಲ ಡಿವಿಶನ್ ಅಧ್ಯಕ್ಷ ಸಯ್ಯಿದ್ ಖುಬೈಬ್ ತಂಙಳ್ ಅಧ್ಯಕ್ಷತೆ ವಹಿಸುವರು.
ನಾಸಿರ್ ಮಾಸ್ಟರ್ ಬಜ್ಪೆ ಹಾಗೂ ಮುಸ್ತಫಾ ಮಾಸ್ಟರ್ ತರಗತಿ ನಡೆಸಲಿದ್ದಾರೆ. ಎಸ್ಸೆಸ್ಸೆಫ್ ದ ಕ ಜಿಲ್ಲಾ ಉಪಾಧ್ಯಕ್ಷ ಮನೀರ್ ಅಹ್ಮದ್ ಕಾಮಿಲ್ ಸಖಾಫಿ , ಎಸ್ಸೆಸ್ಸೆಫ್ ಉಳ್ಳಾಲ ಡಿವಿಶನ್ ಕ್ಯಾಂಪಸ್ ಚಯರ್ಮೆನ್ ಅಬ್ದುಲ್ ರಝ್ಝಾಕ್ ಸಅದಿ, ಡಿವಿಶನ್ ಕಾರ್ಯದರ್ಶಿ ಹಮೀದ್ ತಲಪಾಡಿ, ಡಿವಿಶನ್ ಕ್ಯಾಂಪಸ್ ಕಾರ್ಯದರ್ಶಿ ನಾಸಿರ್ ಮಾಸ್ಟರ್ ಅಜಿನಡ್ಕ ಹಾಗೂ ಇನ್ನಿತರ ನಾಯಕರು ಭಾಗವಹಿಸಲಿದ್ದಾರೆ ಎಂದು ಮಾಧ್ಯಮ ಕಾರ್ಯದರ್ಶಿ ಮೊಹಮ್ಮದ್ ಆಶಿಕ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.